ADVERTISEMENT

ಗುಬ್ಬಿ | ಉರುಳಿದ ಮರ: ಕುಸಿದ ಗೋಡೆ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:36 IST
Last Updated 18 ಮೇ 2024, 14:36 IST
ಗುಬ್ಬಿ ತಾಲ್ಲೂಕಿನ ನೆರಳೇಕೆರೆಯಲ್ಲಿ ಮಳೆಗೆ ಕುಸಿದಿರುವ ಮನೆ ಗೋಡೆ
ಗುಬ್ಬಿ ತಾಲ್ಲೂಕಿನ ನೆರಳೇಕೆರೆಯಲ್ಲಿ ಮಳೆಗೆ ಕುಸಿದಿರುವ ಮನೆ ಗೋಡೆ   

ಗುಬ್ಬಿ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಹಲವೆಡೆ ಮನೆಗಳ ಗೋಡೆ ಕುಸಿದಿದೆ. ಮರಗಳು ಧರೆಗೆ ಉರುಳಿದರೆ, ಪಟ್ಟಣದಲ್ಲಿ ಚರಂಡಿಗಳು ಕಟ್ಟಿ ರಸ್ತೆಯ ಮೇಲೆ ನೀರು ಹರಿದಿದೆ. ಹಲವು ಬಡಾವಣೆಗಳ ತಗ್ಗಿನ ಮನೆ ಹಾಗೂ ಮಳಿಗೆಗಳಿಗೆ ನೀರು ನುಗ್ಗಿತ್ತು.

ಗುಬ್ಬಿ-ಚೇಳೂರು ರಸ್ತೆಯಲ್ಲಿ ರೈಲ್ವೆ ಕೆಳಸೇತುವೆ ಸಂಪೂರ್ಣ ಜಲಾವೃತಗೊಂಡು ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದಂತಾಗಿತ್ತು.

ಪಟ್ಟಣದ ಮಾರನಕಟ್ಟೆ ದಿಣ್ಣೆಯಿಂದ ಬಂದ ನೀರು ರಸ್ತೆಯಲ್ಲಿ ಹರಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ADVERTISEMENT

ಎರಡು ದಿನಗಳಲ್ಲಿ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ಒಟ್ಟು ಏಳು ಮನೆಗಳು ಕುಸಿದು ಬಿದ್ದಿವೆ. ಕಸಬ ಹೋಬಳಿಯಲ್ಲಿ 4, ಕಡಬ ನಿಟ್ಟೂರು ಹಾಗೂ ಹಾಗಲವಾಡಿಗಳಲ್ಲಿ ತಲಾ ಒಂದು ಮನೆಗಳ ಗೋಡೆ ಕುಸಿದಿದೆ. ಹಲವೆಡೆ ತೆಂಗು ಮತ್ತು ಅಡಿಕೆ ಮರಗಳು ಮುರಿದು ಬಿದ್ದಿವೆ. ಕಸಬಾ ಹೋಬಳಿ ಕಿಟ್ಟದ್ದಕುಪ್ಪೆ- ತೊರೆಹಳ್ಳಿ ಸಂಪರ್ಕಿಸುವ ಸೇತುವೆ ಮೇಲೆ ನೀರು ಹರಿಯಲು ಪ್ರಾರಂಭಿಸಿದೆ.

ಚೇಳೂರು ರಸ್ತೆಯಲ್ಲಿ ಜಲಾವೃತಗೊಂಡಿ‌ರುವ ರೈಲ್ವೆ ಕೆಳಸೇತುವೆ 

ತಾಲ್ಲೂಕಿನಲ್ಲಿ ಉತ್ತಮವಾಗಿ ಮಳೆ ಆಗುತ್ತಿದ್ದು ತಾಲ್ಲೂಕು ಆಡಳಿತ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ನಡೆಸಿದೆ. ಮನೆಗಳು ಕುಸಿದು ಬಿದ್ದಿರುವ ಸಂತ್ರಸ್ತರಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ.

-ಆರತಿ ಬಿ. ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.