ADVERTISEMENT

ಸಾವಯವ ಕೃಷಿಕ ಶಂಕರಪ್ಪಗೆ ರಾಜ್ಯೋತ್ಸವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 6:21 IST
Last Updated 1 ನವೆಂಬರ್ 2021, 6:21 IST
ಎಸ್.ಶಂಕರಪ್ಪ
ಎಸ್.ಶಂಕರಪ್ಪ   

ತುಮಕೂರು: ರಸಗೊಬ್ಬರ, ಕೀಟನಾಶಕ ಬಳಕೆ ಮಾಡದೆ ಪೂರ್ಣ ಪ್ರಮಾಣದಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದಾರೆ ಗುಬ್ಬಿ ತಾಲ್ಲೂಕು ಅಮ್ಮನಘಟ್ಟ ಗ್ರಾಮದ ರೈತ ಎಸ್.ಶಂಕರಪ್ಪ.

ಸಾವಯವ ಕೃಷಿಯಲ್ಲಿ ನಿರತರಾಗಿರುವುದನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಸದಾ ಸಾವಯವ ಕೃಷಿ ಪ್ರೋತ್ಸಾಹಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ 8 ಎಕರೆ ಜಮೀನಿನಲ್ಲಿ ವಿವಿಧ ರೀತಿಯ ಗಿಡ, ಮರಗಳನ್ನು ಬೆಳೆಸಿದ್ದಾರೆ. 300 ತೆಂಗು, 1,200 ಅಡಿಕೆ, 2 ಸಾವಿರ ಬಾಳೆ, 16 ಹಲಸು, 15 ಮಾವು, 100 ಮೆಣಸು, ಸಪೋಟ ಸೇರಿದಂತೆ ವಿವಿಧ ತಳಿಯ ಗಿಡಗಳನ್ನು ಕಾಪಾಡುತ್ತಿದ್ದಾರೆ. ಸಾವಯವ ಪದ್ಧತಿಯಲ್ಲೇ ಗಿಡ, ಮರಗಳನ್ನು ಆರೈಕೆ ಮಾಡುತ್ತಿದ್ದು, ಉತ್ತಮ ಫಲ ನೀಡುತ್ತಿವೆ. ಮಳೆ ನೀರು ಸಂಗ್ರಹಿಸಿ, ಅದೇ ನೀರನ್ನು ಕೃಷಿಗೆ ಬಳಕೆ ಮಾಡಿಕೊಂಡಿದ್ದಾರೆ.

ADVERTISEMENT

ಕೃಷಿ ಜತೆಗೆ ಸಂಘ, ಸಂಸ್ಥೆಗಳಲ್ಲೂ ತೊಡಗಿಸಿಕೊಂಡು ಸಾವಯವ ಕೃಷಿಗೆ ನೆರವು ನೀಡುತ್ತಿದ್ದಾರೆ. ನಿಸರ್ಗ ಸಾವಯವ ಕೃಷಿ ಪರಿವಾರದ ನಿರ್ದೇಶಕ ಹಾಗೂ ಜಿಲ್ಲಾ ಸಂಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಸುಭಿಕ್ಷಾ ಆರ್ಗಾನಿಕ್ ಫಾರ್ಮರ್ಸ್ ಮಲ್ಟಿ ಸ್ಟೇಟ್ಸ್ ಕೋ–ಆಪರೇಟಿವ್ ಸೊಸೈಟಿ’ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುವ ಮೂಲಕಸಾವಯವ ಕೃಷಿಗೆಬೆನ್ನೆಲುಬಾಗಿ ನಿಂತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.