ADVERTISEMENT

ರೇಣುಕಾಚಾರ್ಯ, ಬಸವಣ್ಣ, ಸಿದ್ಧರಾಮೇಶ್ವರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 5:59 IST
Last Updated 11 ಮೇ 2024, 5:59 IST
<div class="paragraphs"><p>ತುಮಕೂರಿನಲ್ಲಿ ಶುಕ್ರವಾರ ರೇಣುಕಾಚಾರ್ಯ, ಬಸವಣ್ಣ, ಸಿದ್ಧರಾಮೇಶ್ವರ ಮೂರ್ತಿಗಳ ಮೆರವಣಿಗೆ ನಡೆಯಿತು. ಸಿದ್ಧಲಿಂಗ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಸಮಾಜದ ಪ್ರಮುಖರಾದ ರುದ್ರಕುಮಾರ್ ಆರಾಧ್ಯ, ಮೋಹನ್‍ ಕುಮಾರ್ ಪಟೇಲ್ ಇತರರು ಭಾಗವಹಿಸಿದ್ದರು</p></div>

ತುಮಕೂರಿನಲ್ಲಿ ಶುಕ್ರವಾರ ರೇಣುಕಾಚಾರ್ಯ, ಬಸವಣ್ಣ, ಸಿದ್ಧರಾಮೇಶ್ವರ ಮೂರ್ತಿಗಳ ಮೆರವಣಿಗೆ ನಡೆಯಿತು. ಸಿದ್ಧಲಿಂಗ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಸಮಾಜದ ಪ್ರಮುಖರಾದ ರುದ್ರಕುಮಾರ್ ಆರಾಧ್ಯ, ಮೋಹನ್‍ ಕುಮಾರ್ ಪಟೇಲ್ ಇತರರು ಭಾಗವಹಿಸಿದ್ದರು

   

ತುಮಕೂರು: ಜಗದ್ಗುರು ರೇಣುಕಾಚಾರ್ಯ, ಜಗಜ್ಯೋತಿ ಬಸವೇಶ್ವರ ಹಾಗೂ ಕಾಯಕಯೋಗಿ ಸಿದ್ಧರಾಮೇಶ್ವರ ಮೂರ್ತಿಗಳ ಮೆರವಣಿಗೆ ನಗರದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಬಸವ ಜಯಂತಿ ಅಂಗವಾಗಿ ವೀರಶೈವ ಸಮಾಜ ಸೇವಾ ಸಮಿತಿ ಹಾಗೂ ವೀರಶೈವ ಸಂಘ, ಸಂಸ್ಥೆಗಳ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಮೆರವಣಿಗೆಗಾಗಿ ಹೂವಿನ ಮಂಟಪ ಸಿದ್ಧಪಡಿಸಲಾಗಿತ್ತು. ವಿಶೇಷವಾಗಿ ಅಲಂಕರಿಸಿದ್ದ ಮಂಟಪದಲ್ಲಿ ರೇಣುಕಾಚಾರ್ಯ, ಬಸವಣ್ಣ, ಸಿದ್ಧರಾಮೇಶ್ವರರ ಮೂರ್ತಿ ಹಾಗೂ ಶಿವಕುಮಾರ ಸ್ವಾಮೀಜಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮಂಗಳ ವಾದ್ಯದೊಂದಿಗೆ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ನಂದಿ ಧ್ವಜ, ವೀರಗಾಸೆ, ಕರಡಿ ವಾದ್ಯ, ನಗಾರಿ, ಕಂಬದ ಕುಣಿತ, ತಮಟೆ ವಾದ್ಯ, ಚಂಡೆ ವಾದ್ಯ, ಡಂಕ ವಾದ್ಯ, ಹುಲಿವೇಷ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪ್ರದರ್ಶನದ ಮೆರುಗು ಹೆಚ್ಚಿಸಿದವು.

ನಗರದ ಎಸ್‌ಐಟಿ ಶಿವ ಗಣಪತಿ ದೇಗುಲದ ಬಳಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಿ.ಎಚ್.ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಹಿರೇಮಠದ ಅಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಾಕನಹಳ್ಳಿ ಜಂಗಮ ಮಠದ ಗಂಗಾಧರ ಸ್ವಾಮೀಜಿ, ಶಿವಗಂಗೆ ಹೊನ್ನಾದೇವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸೇವಾ ಸಮಿತಿ ಗೌರವ ಕಾರ್ಯದರ್ಶಿ ಅತ್ತಿರೇಣುಕಾನಂದ, ಜಂಟಿ ಕಾರ್ಯದರ್ಶಿ ಟಿ.ಎನ್.ರುದ್ರೇಶ್, ಖಜಾಂಚಿ ಶಿವಲಿಂಗಮ್ಮ, ಆಡಳಿತಾಧಿಕಾರಿ ರುದ್ರಕುಮಾರ್ ಆರಾಧ್ಯ, ನಿರ್ದೇಶಕರಾದ ಮೋಹನ್‍ ಕುಮಾರ್ ಪಟೇಲ್, ರವಿಶಂಕರ್, ತಾಂಡವಮೂರ್ತಿ, ಯೋಗೀಶ್, ಕೆ.ಎಸ್.ನಾಗರಾಜು, ಟಿ.ಆರ್.ನಟರಾಜು, ಡಿ.ಆರ್.ಮಲ್ಲೇಶಯ್ಯ, ಆರ್.ಮಂಜುನಾಥ್, ಕೆ.ಎಸ್.ವಿಶ್ವನಾಥ್, ಸಿದ್ಧಗಂಗಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಮೊದಲಾದವರು ಭಾಗವಹಿಸಿದ್ದರು.

ಕಲಾ ತಂಡಗಳ ಮೆರುಗು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.