ADVERTISEMENT

ಕುಣಿಗಲ್: ರೈಲ್ವೆ ಮಾರ್ಗದ ಇಕ್ಕೆಲಗಳಲ್ಲಿ ರಸ್ತೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:16 IST
Last Updated 26 ಸೆಪ್ಟೆಂಬರ್ 2024, 4:16 IST
ಕುಣಿಗಲ್ ರೈಲ್ವೆ ನಿಲ್ದಾಣದಿಂದ ಮದ್ದೂರು ರಸ್ತೆವರೆಗೆ ಸೇವಾ ರಸ್ತೆ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು
ಕುಣಿಗಲ್ ರೈಲ್ವೆ ನಿಲ್ದಾಣದಿಂದ ಮದ್ದೂರು ರಸ್ತೆವರೆಗೆ ಸೇವಾ ರಸ್ತೆ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು   

ಕುಣಿಗಲ್: ಪಟ್ಟಣದ ರೈಲು ನಿಲ್ದಾಣದಿಂದ ಮದ್ದೂರು ರಸ್ತೆವರೆಗಿನ ಇಕ್ಕೆಲಗಳಲ್ಲಿ ಸೇವಾ ರಸ್ತೆಗಾಗಿ ನಾಗರಿಕರು ಮತ್ತು ಜಮೀನು ಮಾಲೀಕರು, ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಕಚೇರಿ ಮುಂದೆ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಜಮೀನು ಮಾಲೀಕರಾದ ಭೈರಪ್ಪ, ಸುರೇಶ್, ಈ ಭಾಗದಲ್ಲಿ ಹಳಿಗಳ ನಿರ್ಮಾಣಕ್ಕೆ ರೈತರು ಜಮೀನು ನೀಡಿದ್ದಾರೆ. ಆದರೆ ರೈಲ್ವೆ ಮಾರ್ಗದ ಇಕ್ಕೆಲಗಳಲ್ಲಿರುವ ಮನೆಗಳಿಗೆ, ರೈತರ ಜಮೀನುಗಳಿಗೆ ಹೋಗಲು ಸೇವಾ ರಸ್ತೆ ನಿರ್ಮಾಣವಾಗಿಲ್ಲ. ರೈಲ್ವೆ ಇಲಾಖೆಯವರು ತಮ್ಮ ಅನುಕೂಲಕ್ಕಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆಯೇ ಹೊರತು ರೈತರ, ನಾಗರಿಕರ ಅನುಕೂಲಕ್ಕೆ ಅಲ್ಲ. ರೈತರು ಪರ್ಯಾಯವಾಗಿ ನಿರ್ಮಿಸಿಕೊಂಡಿರುವ ರಸ್ತೆಗಳಿಗೆ ತಡೆಗೋಡೆ ನಿರ್ಮಿಸಿ ಅನಾನುಕೂಲ ಮಾಡುತ್ತಿದ್ದಾರೆ ಎಂದು ದೂರಿದರು.

ನರೇಂದ್ರ, ನಾಗೇಂದ್ರ, ರಾಮಯ್ಯ, ಜಯಮ್ಮ, ಲೋಕೇಶ್ ರಾಮಸ್ವಾಮಿ, ದೇವರಾಜ, ಚಿಕ್ಕಣ್ಣ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.