ADVERTISEMENT

ಅಮೃತೂರು ಪಿಎಸ್ಐ ವಿರುದ್ಧ ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:28 IST
Last Updated 13 ಜೂನ್ 2024, 14:28 IST

ಕುಣಿಗಲ್: ‘ತಾಲ್ಲೂಕಿನ ಅಮೃತೂರು ಪೊಲೀಸ್‌ ಠಾಣೆ ಪಿಎಸ್ಐ ಸೌಜನ್ಯದಿಂದ ವರ್ತಿಸುತ್ತಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಪದಾಧಿಕಾರಿಗಳು ಡಿವೈಎಸ್‌ಪಿ ಓಂ ಪ್ರಕಾಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಜರಂಗದಳದ ಅಧ್ಯಕ್ಷ ಗಿರೀಶ್, ಜೂನ್‌ 11ರಂದು ರಾತ್ರಿ ಹೇಮಾವತಿ ವೃತ್ತದ ಬಳಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಡೆಯಲಾಗಿತ್ತು. ಜಾನುವಾರುಗಳನ್ನು ಇಳಿಸಿ, ವಾಹನ ಸಮೇತ ಚಾಲಕ ಪರಾರಿಯಾಗಿದ್ದ. ಈ ಬಗ್ಗೆ ಠಾಣೆಗೆ ದೂರು ನೀಡುವ ಸಮಯದಲ್ಲಿ ಪಿಎಸ್ಐ ಶಮಂತ್ ಗೌಡ, ಸಿಬ್ಬಂದಿ ದಯಾನಂದ್ ಸೌಜನ್ಯದಿಂದ ವರ್ತಿಸದೆ ದರ್ಪ ತೋರಿದ್ದಾರೆ. ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT