ADVERTISEMENT

ಕುಣಿಗಲ್: ಜಾಣಗೆರೆ ಕೆರೆ ಒತ್ತುವರಿ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 16:04 IST
Last Updated 21 ಡಿಸೆಂಬರ್ 2023, 16:04 IST
ಕುಣಿಗಲ್ ತಾಲ್ಲೂಕು ಜಾಣಗೆರೆ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ಗ್ರಾಮಸ್ಥರು ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು
ಕುಣಿಗಲ್ ತಾಲ್ಲೂಕು ಜಾಣಗೆರೆ ಕೆರೆ ಒತ್ತುವರಿ ತೆರವಿಗೆ ಒತ್ತಾಯಿಸಿ ಗ್ರಾಮಸ್ಥರು ತಹಶೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು   

ಕುಣಿಗಲ್: ತಾಲ್ಲೂಕಿನ ಕೊತ್ತೆಗೆರೆ ಹೋಬಳಿಯ ಜಾಣಗೆರೆ ಕೆರೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ತಹಶೀಲ್ದಾರ್ ವಿಶ್ವನಾಥ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥ ಚಂದ್ರಪ್ಪ, ಪುರಾತನ ಇತಿಹಾಸವುಳ್ಳ ಜಾಣಗೆರೆ ಕೆರೆಯನ್ನು, ಕೆಲವರು ಪೂರ್ವಜರ ಆಸ್ತಿ ಎಂದು ಹೇಳಿಕೊಂಡು, ಅಕ್ರಮವಾಗಿ ದಾಖಲೆ ಸೃಷ್ಟಿಸಿ, ಕೆರೆಯ ಮಧ್ಯಭಾಗದಲ್ಲಿ ಬೇಲಿ ನಿರ್ಮಿಸಿಸಲು ಮುಂದಾಗಿದ್ದಾರೆ. ಕೆರೆಯ ಮಧ್ಯಭಾಗದಲ್ಲಿರುವ ಜಮೀನನ್ನು ಏಕಾಏಕಿ ದಾಖಲೆ ಸೃಷ್ಟಿಸಿ ವಶಕ್ಕೆ ಪಡೆಯಲು ಸಂಚು ನಡೆಯುತ್ತಿದೆ. ಅತಿಕ್ರಮಿಸಿರುವ ಮತ್ತು ಅಕ್ರಮ ದಾಖಲೆ ಸೃಷ್ಟಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಕೆರೆ ಸಂರಕ್ಷಣೆ ಮಾಡಬೇಕು ಎಂದರು.

ಗ್ರಾಮಸ್ಥರಾದ ಮಂಜಪ್ಪ, ಶ್ರೀನಿವಾಸ್, ಹನುಮಯ್ಯ, ರಮೇಶ್, ರಘೂ, ರವಿಕುಮಾರ್ ನಾಗರಾಜು, ಗಿರೀಶ, ಗೋವಿಂದಯ್ಯ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.