ADVERTISEMENT

ಶಿವಕುಮಾರ ಶ್ರೀ ಕ್ರಿಯಾಸಮಾಧಿಗೆ ಸಿದ್ಧತೆ, ಪೂಜೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 9:04 IST
Last Updated 22 ಜನವರಿ 2019, 9:04 IST
ಕ್ರಿಯಾಸಮಾಧಿ ಸ್ಥಳವನ್ನು ಹೂವುಗಳಿಂದ ಅಲಂಕಿಸಿ ಪೂಜೆ ಸಲ್ಲಿಸಲಾಗುತ್ತಿದೆ
ಕ್ರಿಯಾಸಮಾಧಿ ಸ್ಥಳವನ್ನು ಹೂವುಗಳಿಂದ ಅಲಂಕಿಸಿ ಪೂಜೆ ಸಲ್ಲಿಸಲಾಗುತ್ತಿದೆ   

ತುಮಕೂರು:ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿ ನೆರವೇರಿಸಲು ಸಕಲ ಸಿದ್ಧತೆ ನಡೆದಿದ್ದು, ಆ ಸ್ಥಳವನ್ನು ಹೂವುಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.

ಮಂಗಳವಾರ ಬೆಳಿಗ್ಗೆಯಿಂದ ಶ್ರೀಮಠದ ಹಾಗೂ ವಿವಿಧ ಮಠಗಳ ಪೂಜ್ಯರು ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ.

ಇನ್ನು ಶ್ರಿಗಳ ದರ್ಶನಕ್ಕೆ ಸಿದ್ಧಗಂಗಾ ಮಠದತ್ತ ಭಕ್ತ ಸಾಗರವೇ ಹರಿದು ಬರುತ್ತಿದೆ. ಉದ್ದ ಸರದಿಯಲ್ಲಿ ಜನ ನಿಂತಿದ್ದು, ಗಂಟೆ ಗಂಟೆಗೂ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ.

ADVERTISEMENT

ಹಲವೆಡೆ ಭಕ್ತರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ, ಶ್ರೀಗಳ ಸಾಧನೆಯ ಘೋಷಣೆ ಕೂಗುತ್ತಿದ್ದಾರೆ.

ಕ್ರಿಯಾಸಮಾಧಿ ನಡೆಯುವ ಮಂದಿರದ ಹೊರ ನೋಟ

3ರ ವರೆಗೆ ಮಾತ್ರ ದರ್ಶನ: ಕಿರಿಯ ಶ್ರೀ
ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಅವಕಾಶ. ನಂತರ ಸಮಯ ವಿಸ್ತರಣೆ ಇಲ್ಲ. 3.30ರ ಬಳಿಕ ಕ್ರಿಯಾಸಮಾಧಿ ಪ್ರಕ್ರಿಯೆ ನಡೆಯಲಿದೆ ಎಂದು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

* ಇವನ್ನೂ ಓದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.