ಶಿರಾ: ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಯುವ ನಾಲೆಯನ್ನು ಒಡೆದು ಚನ್ನನಕುಂಟೆ ಕೆರೆಗೆ ಅನಧಿಕೃತವಾಗಿ ನೀರು ಹರಿಸಿಕೊಳ್ಳುತ್ತಿರುವುದಕ್ಕೆ ತಾಲ್ಲೂಕು ಆಡಳಿತ ಕಡಿವಾಣ ಹಾಕಿ ಒಡೆದ ನಾಲೆಯನ್ನು ಸರಿಪಡಿಸಿದ್ದಾರೆ.
‘ಪ್ರಜಾವಾಣಿ’ಯಲ್ಲಿ ನವೆಂಬರ್ 21ರಂದು ಪ್ರಕಟವಾದ ‘ನಾಲೆ ಒಡೆದು ಚನ್ನನಕುಂಟೆ ಕೆರೆಗೆ ನೀರು’ ವರದಿ ಪ್ರಕಟಗೊಂಡ ನಂತರ ಒಡೆದ ನಾಲೆಯನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ.
ನಿಗದಿತ ಕೆರೆಗಳಿಗೆ ನೀರು ಹರಿಯುವುದಕ್ಕೂ ಮೊದಲೇ ನಾಲೆಯನ್ನು ಒಡೆದು ಚನ್ನನಕುಂಟೆ ಕೆರೆಗೆ 20 ದಿನಗಳಿಂದ ನೀರು ಹರಿಯುತ್ತಿದ್ದರೂ ತಾಲ್ಲೂಕು ಆಡಳಿತ, ಅಧಿಕಾರಿಗಳು ನಿರ್ಲಕ್ಷ್ಯ ದೋರಣೆ ತಾಳಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು.
ವರದಿ ಪ್ರಕಟವಾದ ತಕ್ಷಣ ಜೆಸಿಬಿ ಮೂಲಕ ಮಣ್ಣು ಹಾಕಿ ಒಡೆದ ನಾಲೆಯನ್ನು ಸರಿಪಡಿಸಿ ಚನ್ನನಕುಂಟೆ ಕೆರೆಗೆ ಹೋಗುತ್ತಿದ್ದ ನೀರನ್ನು ತಡೆದಿದ್ದಾರೆ.
ನಾಲೆಯನ್ನು ಸರಿಪಡಿಸಿದ ಬಳಿಕ ಅಧಿಕಾರಿಗಳು ನಾಲೆ ಒಡೆದವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.