ADVERTISEMENT

ವಿದ್ಯಾರ್ಥಿಗೆ ಪ್ರೇರಣೆ ತುಂಬಿದ ಶಿಬಿರ

ನಲಿಯುತ್ತಾ ಕಲಿತ ಮಕ್ಕಳು, ಭಯ ಹೋಗಲಾಡಿಸಿದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 5:15 IST
Last Updated 7 ಮಾರ್ಚ್ 2024, 5:15 IST

ತುಮಕೂರು: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರೀಕ್ಷಾ ಕಾರ್ಯಾಗಾರ, ಪ್ರೇರಣಾ ಶಿಬಿರದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಆರಂಭದಿಂದ ಕೊನೆಯ ತನಕ ತದೇಕ ಚಿತ್ತದಿಂದ ತಜ್ಞರ ಮಾತುಗಳನ್ನು ಆಲಿಸಿದರು. ಕಠಿಣ ವಿಷಯಗಳನ್ನು ತಜ್ಞರು ತುಂಬಾ ಸುಲಭವಾಗಿ ವಿವರಿಸಿದರು. ಇದು ಮಕ್ಕಳನ್ನು ಆಕರ್ಷಿಸಿತು. ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರು ಹಾಸ್ಯ ಭರಿತ ಮಾತುಗಳಿಂದಲೇ ಮಕ್ಕಳ ಮನ ಮುಟ್ಟಿದರು. ವಿದ್ಯಾರ್ಥಿಗಳಿಗೆ ಪೋಷಕರು, ಶಿಕ್ಷಕರು ಸಾಥ್‌ ನೀಡಿದರು.

ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಾಗುತ್ತಿದೆ. ಯಾವುದೇ ಆತಂಕ, ಭಯ ಇಲ್ಲದೆ ಪರೀಕ್ಷೆಗೆ ಹಾಜರಾಗುವ, ಪ್ರಶ್ನೆಗಳಿಗೆ ಉತ್ತರಿಸುವ ಬಗೆಯನ್ನು ಸುಲಭವಾಗಿ ಹೇಳಿಕೊಟ್ಟರು. ರೇಖಾಚಿತ್ರ, ಪಿಪಿಟಿಗಳ ಮುಖಾಂತರ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು. ಕಾರ್ಯಾಗಾರ ಮುಗಿದ ನಂತರ ವಿದ್ಯಾರ್ಥಿಗಳು ನಗು ಮೊಗದಿಂದ ತಮ್ಮ ಶಾಲೆಗಳತ್ತ ತೆರಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.