ತುಮಕೂರು: ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಮೈಸೂರಿನ ಪಿ.ಚಿರಂತ್ 10.61 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಚಿರತೆಯ ವೇಗದಲ್ಲಿ ಓಡಿ ದಾಖಲೆ ಬರೆದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಆರ್ಯ ಕಂದಕುಮಾರ್ (10.72 ಸೆಕೆಂಡ್) ದ್ವಿತೀಯ, ಬೆಂಗಳೂರು ಉತ್ತರದ ಎ.ಅಬುಬಕರ್ (10.78 ಸೆಕೆಂಡ್) ತೃತೀಯ ಸ್ಥಾನ ಪಡೆದರು.
ವಿವಿಧ ಸ್ಪರ್ಧೆಗಳ ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.
ಬಾಲಕರ ವಿಭಾಗ: 800 ಮೀಟರ್ ಓಟ– ಕೃಷ್ಣ ರಾಥೋಡ್ (ವಿಜಯಪುರ), ನಾಗರಾಜ್ ಸುರೇಶ್ ರಾವತ್ (ಉಡುಪಿ), ಶಿವಾನಂದ ಕರೆಪ್ಪ ಪೂಜಾರಿ (ಮಂಗಳೂರು). 400 ಮೀಟರ್ ಹರ್ಡಲ್ಸ್– ಭೂಷಣ್ ಸುನಿಲ್ ಪಾಟೀಲ್ (ಬೆಳಗಾವಿ), ಎಂ.ನಿತಿನ್‌ಗೌಡ (ಬೆಂಗಳೂರು ಗ್ರಾಮಾಂತರ), ಪಿ.ಪ್ರೀಥಮ್ (ಚಿತ್ರದುರ್ಗ). ಎತ್ತರ ಜಿಗಿತ– ದರ್ಶನ್ (ಚಿತ್ರದುರ್ಗ), ಸಿನಾನ್ (ಉಡುಪಿ), ಪಿ.ಗೌತಮ್ (ಮೈಸೂರು). ಶಾಟ್‌ಪುಟ್– ಎಚ್.ಎಸ್.ಸುಹಾಸ್ (ಚಾಮರಾಜನಗರ), ಜಿ.ಅನುರಾಗ್ (ಉಡುಪಿ), ಬಿ.ಎ.ಕಾವಲಪ್ಪ ದುರುಗಪ್ಪ (ಬೆಳಗಾವಿ).
ಬಾಲಕಿಯರ ವಿಭಾಗ: 100 ಮೀಟರ್ ಓಟ– ಸ್ತುತಿ ಪಿ.ಶೆಟ್ಟಿ (ಉಡುಪಿ), ಅನುಷಾ ಜಿ.ನಾಯಕ್ (ಶಿವಮೊಗ್ಗ), ನಿದೀಕ್ಷಾ ನಾಯ್ಕ್ (ದಕ್ಷಿಣ ಕನ್ನಡ). 800 ಮೀಟರ್ ಓಟ– ಶಿಲ್ಪಾ ರಾಕೇಶ್ ಹೊಸಮನಿ (ಧಾರವಾಡ), ರಶ್ಮಿತಾ ಗೌಡ (ರಾಮನಗರ), ರಚನಾ ನಾಯಕ್ (ಬೆಂಗಳೂರು ಉತ್ತರ). 400 ಮೀಟರ್ ಹರ್ಡಲ್ಸ್– ಅರ್ನಿಕಾ ವರ್ಷಾ ಡಿಸೋಜಾ (ಉಡುಪಿ), ಇಷಾ ಎಲಿಜಬೆತ್ ರೆಂಜಿತ್ (ಬೆಂಗಳೂರು ದಕ್ಷಿಣ), ವಿ.ದಿವ್ಯಾ (ಬೆಂಗಳೂರು ಗ್ರಾಮಾಂತರ).
ತ್ರಿವಿಧ ಜಿಗಿತ– ವಿ.ನಿತ್ಯಾಶ್ರೀ (ಬೆಂಗಳೂರು ಗ್ರಾಮಾಂತರ), ಆಂಡ್ರಿಯಾ ಮೋಸೆಸ್ ಫೆರ್ಡಿನ್ಯಾಂಡ್ (ಬೆಂಗಳೂರು ಉತ್ತರ), ಎಲ್.ದೀಕ್ಷಾಶ್ರೀ (ಬೆಂಗಳೂರು ದಕ್ಷಿಣ). ಶಾಟ್‌ಪುಟ್– ವಿಸ್ಮಿತ (ದಕ್ಷಿಣ ಕನ್ನಡ), ವ್ರತಾ ಹೆಗ್ಡೆ (ದಕ್ಷಿಣ ಕನ್ನಡ), ಸುಸಾನ್ ಮಿರಂಡ (ಚಿಕ್ಕಬಳ್ಳಾಪುರ). ಜಾವೆಲಿನ್ ಎಸೆತ– ದಿಶಾ ನಲವಾಡಿ (ಬೀದರ್), ಬಾಲಕ್ಕ ಎನ್.ಪಾಟೀಲ್ (ಬೆಳಗಾವಿ), ಎಂ.ವಿ.ಸಿಂಪನಾ (ಮಂಗಳೂರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.