ADVERTISEMENT

'ಶಿಕ್ಷಕರ ರಾಜ್ಯ ಮಟ್ಟದ ಸ್ಪರ್ಧೆಗೆ ತೆರೆ'

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 6:33 IST
Last Updated 1 ಫೆಬ್ರುವರಿ 2024, 6:33 IST
ತುಮಕೂರಿನಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು
ತುಮಕೂರಿನಲ್ಲಿ ಬುಧವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶಿಕ್ಷಕರು   

ತುಮಕೂರು: ಶಾಲಾ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ರಾಜ್ಯ ಮಟ್ಟದ ಸಹ ಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ಬುಧವಾರ ತೆರೆ ಬಿತ್ತು.

ನಗರದ ಎಂಪ್ರೆಸ್‌ ಕಾಲೇಜಿನಲ್ಲಿ ಎರಡು ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಶಿಕ್ಷಕರು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕೊನೆಯ ದಿನ ಪ್ರೌಢಶಾಲಾ ಶಿಕ್ಷಕರಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಚಿತ್ರಕಲೆ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ವಿವಿಧ ಸ್ಪರ್ಧೆ ವಿಜೇತರು: ಪ್ರೌಢಶಾಲಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರು.

ADVERTISEMENT

ಆಶುಭಾಷಣ ಸ್ಪರ್ಧೆ: ಟಿ.ಎಂ.ರಾಘವೇಂದ್ರ (ತುಮಕೂರು), ಎಸ್‌.ರಾಜಶೇಖರಪ್ಪ (ದಾವಣಗೆರೆ), ಎಚ್‌.ವಿ.ಯಶವಂತಕುಮಾರ್‌ (ಮೈಸೂರು). ಚಿತ್ರ ಬಿಡಿಸುವ ಸ್ಪರ್ಧೆ: ಎಂ.ವೇಣುಗೋಪಾಲ್‌ ಮೂರ್ತಿ (ಮೈಸೂರು), ರಾಜಶೇಖರ್‌ ಎಂ.ತಾಳಿಕೋಟೆ (ಉಡುಪಿ), ಮಡಿವಾಳಪ್ಪ ಎಸ್‌. (ಹಾವೇರಿ). ರಸಪ್ರಶ್ನೆ ಸ್ಪರ್ಧೆ (ವಿಜ್ಞಾನ): ಟಿ.ಪಿ.ಮಂಜುನಾಥ್‌ (ಚಿತ್ರದುರ್ಗ), ಕೆ.ವಿ.ಶ್ರೀಮತಿ (ಉತ್ತರ ಕನ್ನಡ), ಎಸ್‌.ಎಸ್‌.ಅನಿಲ್‌ಕುಮಾರ್‌ (ಮೈಸೂರು).

ಜನಪದ ಗೀತೆ: ಪದ್ಮರಾಜ್‌ ಆಳಪ್ಪನವರ್‌ (ಚಿಕ್ಕೋಡಿ), ಮಲ್ಲಿಕಾರ್ಜುನ್‌ ಗಣಿ (ಬೆಂಗಳೂರು ಗ್ರಾಮಾಂತರ), ಶ್ರೀಧರ್‌ ಎಸ್‌.ಹೆಗಡೆ (ಶಿರಸಿ). ಪ್ರಬಂಧ: ಮೆಹಬೂಬ್‌ ಸಾಬ್‌ ಮುಲ್ತಾನಿ (ಬೆಳಗಾವಿ), ಶಾಂತಕುಮಾರಿ (ದೇವದುರ್ಗ), ಚಿನ್ನಪ್ಪ ಪಂಡಿತಪ್ಪ ಕರಲಟ್ಟ (ಬಾಗಲಕೋಟೆ). ಪಾಠೋಪಕರಣ ತಯಾರಿಕೆ: ಆರ್‌.ಯು.ನವೀನ್‌ಕುಮಾರ್‌ (ಚಿಕ್ಕಬಳ್ಳಾಪುರ), ಬಿ.ಜಿ.ಮಹೇಶ್‌ (ರಾಯಚೂರು), ಸಯೀದಾ ಕೌಸರ್‌ ತಸ್‌ನಿಮ್‌ (ದಾವಣಗೆರೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.