ADVERTISEMENT

ಕೊರಟಗೆರೆ: ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪ್ರವಾಸ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 12:38 IST
Last Updated 9 ಜುಲೈ 2024, 12:38 IST
ಕೊರಟಗೆರೆ ತಾಲ್ಲೂಕಿನ ಆಯ್ದ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಕೆ.ಸಿ.ರೆಡ್ಡಿ, ಸರೋಜಮ್ಮ ವೆಲ್‌ಫೇರ್‌ ಫೌಂಡೇಷನ್‌ನಿಂದ ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಬಿಇಒ ಸಿ.ಎನ್.ನಟರಾಜು, ಫೌಂಡೇಷನ್ ಕಾರ್ಯದರ್ಶಿ ವಸಂತ ಕವಿತಾ ಹಾಜರಿದ್ದರು
ಕೊರಟಗೆರೆ ತಾಲ್ಲೂಕಿನ ಆಯ್ದ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಕೆ.ಸಿ.ರೆಡ್ಡಿ, ಸರೋಜಮ್ಮ ವೆಲ್‌ಫೇರ್‌ ಫೌಂಡೇಷನ್‌ನಿಂದ ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಬಿಇಒ ಸಿ.ಎನ್.ನಟರಾಜು, ಫೌಂಡೇಷನ್ ಕಾರ್ಯದರ್ಶಿ ವಸಂತ ಕವಿತಾ ಹಾಜರಿದ್ದರು   

ಕೊರಟಗೆರೆ: ಬೆಂಗಳೂರಿನ ಕೆ.ಸಿ.ರೆಡ್ಡಿ, ಸರೋಜಮ್ಮ ವೆಲ್ಫೇರ್ ಫೌಂಡೇಷನ್ ವತಿಯಿಂದ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಷನ್ ಸಹಕಾರದೊಂದಿಗೆ ತಾಲ್ಲೂಕಿನ ಪರಿಶಿಷ್ಟ ಜಾತಿ ಹಾಗೂ ಪಂಗಡದ 104 ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಎರಡು ದಿನಗಳ ಕಾಲ ಉಚಿತ ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ಯಲಾಯಿತು.


ಮಂಗಳವಾರ ಮುಂಜಾನೆ ಎರಡು ಸರ್ಕಾರಿ ಬಸ್ ಗಳಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು. ಬಿಇಓ ಸಿ.ಎನ್.ನಟರಾಜು ಹಸಿರು ನಿಶಾನೆ ತೋರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.


ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿನ್ನೆಯಲ್ಲಿ ಮ್ಯೂಜಿಯಂ, ಡೇರಿ ಸಂಶೋಧನಾ ಪ್ರಯೋಗಾಲಯ, ವಿಜ್ಞಾನ ಪ್ರದರ್ಶನ, ತಾರಾಲಯ, ಜಿಕೆವಿಕೆ, ಪಶುಸಂಗೋಪನ ಪ್ರಯೋಗಾಲಯ, ರಕ್ಷಣಾ ಸಂಶೋಧನಾ ಪ್ರಯೋಗಾಲಯ, ಮೈಸೂರು ಹಳೇ ರೈಲ್ವೆ ಮತ್ತು ವಸ್ತು ಸಂಗ್ರಹಾಲಯ ಸೇರಿದಂತೆ ವಿವಿಧ ಶೈಕ್ಷಣಿಕ ಅನುಕೂಲವಾಗುವಂತ ಸ್ಥಳಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ದು ಆ ಬಗ್ಗೆ ಅವರಿಗೆ ವಿಷಯ ಮಂಡನೆ ಮಾಡಲಾಗುವುದು. ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರವಾಸ ಹೋಗುವುದು ಕಷ್ಟವಾಗುತ್ತದೆ. ಇದರಿಂದ ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗುತ್ತಾರೆ. ಇದು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಬಹುದು. ಆ ಕಾರಣದಿಂದಾಗಿ ನಮ್ಮ ಪೌಡೇಷನ್ ವತಿಯಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಪ್ರವಾಸ ಕೈಗೊಳ್ಳಲಾಗಿದೆ. ಎರಡೂ ದಿನಗಳ ವಿದ್ಯಾರ್ಥಿಗಳ ಖರ್ಚುವೆಚ್ಚವನ್ನು ನಾವೇ ಭರಿಸಿ ಮತ್ತೆ ಸುರಕ್ಷಿತವಾಗಿ ವಾಪಸ್ ಕರೆತರಲಾಗುವುದು ಎಂದು ಫೌಂಡೇಷನ್ ಕಾರ್ಯದರ್ಶಿ ವಸಂತ ಕವಿತಾ ಮಾಹಿತಿ ನೀಡಿದರು.

ADVERTISEMENT


ಈ ಸಂದರ್ಭದಲ್ಲಿ ಕೆ.ಸಿ.ಸಂಯುಕ್ತ ರೆಡ್ಡಿ, ಅಂಬರೀಶ್, ರಾಜು, ಶಿಕ್ಷಕರಾದ ವಿಶ್ವನಾಥ್, ಚಿಕ್ಕಪ್ಪಯ್ಯ, ನರಸಿಂಹರಾಜು, ಜಯಲಕ್ಷ್ಮಿ, ವಸುಂಧರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.