ADVERTISEMENT

ಹೊಸ ಕಾನೂನಿಗೆ ಎಸ್‌ಯುಸಿಐ ವಿರೋಧ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:21 IST
Last Updated 2 ಜುಲೈ 2024, 16:21 IST
<div class="paragraphs"><p>ಎಸ್‌ಯುಸಿಐ</p></div>

ಎಸ್‌ಯುಸಿಐ

   

ತುಮಕೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಅಪರಾಧ ಕಾನೂನುಗಳು ನಿರಂಕುಶ ಆಡಳಿತ, ಅಘೋಷಿತ ತುರ್ತು ಪರಿಸ್ಥಿತಿ ಮುಂದುವರಿಸಲು ನೆರವಾಗುತ್ತವೆ ಎಂದು ಎಸ್‌ಯುಸಿಐ ಆರೋಪಿಸಿದೆ.

‘ಸಾರ್ವಜನಿಕರು, ನ್ಯಾಯಶಾಸ್ತ್ರಜ್ಞರ ಮತ್ತು ಇತರ ಗಣ್ಯ ವ್ಯಕ್ತಿಗಳ ಅಭಿಪ್ರಾಯ ಧಿಕ್ಕರಿಸಿ ಕರಾಳ ಅಪರಾಧ ಕಾನೂನುಗಳನ್ನು ಜಾರಿಗೆ ತರಲಾಗಿದೆ. ವಸಾಹತುಶಾಹಿ ಆಳ್ವಿಕೆಯಲ್ಲಿ ಜಾರಿಯಾದ ಕಾನೂನಿನ ಬದಲಿಗೆ ಹೊಸ ಕಾನೂನು ಜಾರಿಗೊಳಿಸಲಾಗಿದೆ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಇವು ಹೆಚ್ಚು ಕಠೋರ ಮತ್ತು ನಿರ್ದಯವಾಗಿವೆ. ದೇಶವನ್ನು ಪೊಲೀಸ್‌ ರಾಜ್ ಆಗಿ ಪರಿವರ್ತಿಸಲು ಉದ್ದೇಶಿಸಿವೆ’ ಎಂದು ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಎಸ್‌.ಎನ್‌.ಸ್ವಾಮಿ ದೂರಿದ್ದಾರೆ.

ADVERTISEMENT

ಬಿಜೆಪಿ ಸರ್ಕಾರ ದುಡಿಯುವ ಜನರ ಬದುಕನ್ನು ಮತ್ತಷ್ಟು ವಿನಾಶಕಾರಿಯಾಗಿಸಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗಿದೆ. ಈ ಕಾನೂನುಗಳನ್ನು ತಕ್ಷಣವೇ ರದ್ದುಗೊಳಿಸಬೇಕು. ಇದರ ವಿರುದ್ಧ ಜನರು, ನ್ಯಾಯ ಶಾಸ್ತ್ರಜ್ಞರು ಮತ್ತು ಬುದ್ಧಿಜೀವಿಗಳು ಧ್ವನಿ ಎತ್ತುವಂತೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.