ADVERTISEMENT

‘ದಲಿತ’ ಮರು ವ್ಯಾಖ್ಯಾನ ಮಾಡುವ ಅವಶ್ಯಕತೆಯಿದೆ: ವಿಮರ್ಶಕ ರವಿಕುಮಾರ್ ನೀಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 16:19 IST
Last Updated 2 ಜುಲೈ 2024, 16:19 IST
<div class="paragraphs"><p>ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ದಲಿತ ಸಾಹಿತ್ಯ– ಅನುಭವ ಮತ್ತು ಅನುಭಾವ’ ಉಪನ್ಯಾಸ ಕಾರ್ಯಕ್ರಮದಲ್ಲಿ&nbsp;ವಿಮರ್ಶಕ ರವಿಕುಮಾರ್ ನೀಹ ಮಾತನಾಡಿದರು. </p></div>

ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ದಲಿತ ಸಾಹಿತ್ಯ– ಅನುಭವ ಮತ್ತು ಅನುಭಾವ’ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಮರ್ಶಕ ರವಿಕುಮಾರ್ ನೀಹ ಮಾತನಾಡಿದರು.

   

ತುಮಕೂರು: ‘ದಲಿತ ಚಳವಳಿ ಅನುಭವದ ನೆಲೆಯಿಂದ ಅನುಭಾವದ ನೆಲೆಗೆ ತಲುಪಬೇಕಿದೆ. ದಲಿತ ಎಂಬ ಪರಿಕಲ್ಪನೆಯನ್ನು ಮರು ವ್ಯಾಖ್ಯಾನಿಸುವ ಅವಶ್ಯಕತೆಯಿದೆ’ ಎಂದು ವಿಮರ್ಶಕ ರವಿಕುಮಾರ್ ನೀಹ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಿಂದ ಏರ್ಪಡಿಸಿದ್ದ ‘ದಲಿತ ಸಾಹಿತ್ಯ– ಅನುಭವ ಮತ್ತು ಅನುಭಾವ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ಈ ಹೊತ್ತು ದಲಿತ ಎಂದರೆ, ನಾವು ಲೋಕವನ್ನು ನೋಡುವ ದೃಷ್ಟಿಕೋನ. ದಲಿತ ಅನುಭಾವವೆಂದರೆ, ಕೇವಲ ದೈವಾರಾಧನೆ ಮಾತ್ರವಲ್ಲ. ಅವರ ಬದುಕಿನ ಕಣ್ಣಿನಿಂದ ಲೋಕವನ್ನು ಸಮಗ್ರವಾಗಿ ಕಾಣುವ ಜೀವನಕ್ರಮ. ಹಸಿವು, ಅಪಮಾನ ಇಲ್ಲದೇ ಹೋಗಿದ್ದರೆ ದಲಿತ ಸಾಹಿತ್ಯ ಹುಟ್ಟುತ್ತಿರಲಿಲ್ಲ. ಇದರ ಅನುಭಾವದ ಪರಿ ಬೇರೆ. ಅದು ದಲಿತರ ಬದುಕಿನ ಒಳಗಿನಿಂದಲೇ ಹುಟ್ಟಿದ್ದು’ ಎಂದು ಹೇಳಿದರು.

ದಲಿತರಿಗೆ ದೇವರನ್ನು ಹೊರಗೆ ಹುಡುಕುವ ಅವಶ್ಯಕತೆ ಬರಲಿಲ್ಲ. ಸಕಲ ಚರಾಚರವನ್ನು ಒಳಗೊಳ್ಳುವ ಮೂಲಕ ಜಗತ್ತು ಕೇವಲ ಮನುಷ್ಯ ಕೇಂದ್ರಿತವಲ್ಲ ಎಂಬುದನ್ನು ದಲಿತ ಸಾಹಿತ್ಯ ಪ್ರತಿಫಲಿಸಿದೆ. ದಲಿತ ಸಾಹಿತ್ಯವೆಂದರೆ ಎಲ್ಲರನ್ನೂ ಒಳಗೊಂಡು ಜೊತೆಜೊತೆಯಾಗಿ ಸಾಗುವ ಹಂಬಲ ಎಂದು ಅಭಿಪ್ರಾಯಪಟ್ಟರು.

ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಪ್ರಾಧ್ಯಾಪಕಿ ಅಣ್ಣಮ್ಮ, ಸಹ ಪ್ರಾಧ್ಯಾಪಕಿ ಗೀತಾ ವಸಂತ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.