ADVERTISEMENT

ದಯಾಭವನದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 14:15 IST
Last Updated 13 ನವೆಂಬರ್ 2024, 14:15 IST
ಕುಣಿಗಲ್ ತಾಲ್ಲೂಕು ದಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರು ವಿವಿ ಬಿಎಸ್‌ಡಬ್ಲು ಪದವಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಕುಣಿಗಲ್ ತಾಲ್ಲೂಕು ದಯಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಮಕೂರು ವಿವಿ ಬಿಎಸ್‌ಡಬ್ಲು ಪದವಿಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಯಿಂದ ನಾಗೇಶ ಸ್ಮಾರಕ ಉಪನ್ಯಾಸ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಬಿಎಸ್‌ಡಬ್ಲು ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಾಗೇಶ ಸ್ಮಾರಕ ಪ್ರಶಸ್ತಿ ವಿತರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದ ಜಮ್ ಜಮ್, ‘ದಯಾಭವನ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದಲ್ಲೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಂಸ್ಥೆ. ಎಲ್ಲರೂ ಮಾನವೀಯತೆ ಪಾಠವನ್ನು ಇಲ್ಲಿ ಕಲಿಯಬೇಕು. ನಾಗೇಶ್ ಸ್ಮರಣಾರ್ಥ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸುತ್ತಿರುವುದು ಸ್ತುತ್ಯಾರ್ಹ ಎಂದು ತಿಳಿಸಿದರು.

ದಯಾಭವನ ಮುಖ್ಯಸ್ಥ ಅಬ್ರಹಾಂ ರಂಭಾನ್ ಭಾಗವಹಿಸಿದ್ದರು.

ADVERTISEMENT

ನಾಗೇಶ್ ಸ್ಮಾರಕ ಉಪನ್ಯಾಸವನ್ನು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ, ರಮೇಶ್ ಬಿ. ನಡೆಸಿಕೊಟ್ಟರು. ಸಿದ್ಧಾರ್ಥ ವಿಶ್ವವಿದ್ಯಾನಿಲಯದ ಕುಲಸಚಿವೆ ಎಂ.ಜೆಡ್. ಕುರಿಯನ್, ಹೋಲಿ ಟ್ರಿನಿಟಿ ಕಾಲೇಜಿನ ಪ್ರಾಂಶಪಾಲೆ ರೇಖಾ, ತುಮಕೂರು ವಿಶ್ವವಿದ್ಯಾನಿಲಯದ ಎಂಎಸ್‌ಡಬ್ಲ್ಯೂ ಹಾಗೂ ಬಿಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

2022ನೇ ಸಾಲಿನಲ್ಲಿ ಅತಿಹೆಚ್ಚು ಅಂಕ ಪಡೆದ ವರಲಕ್ಷ್ಮಿ, 2023ನೇ ಸಾಲಿನ ಲಕ್ಷ್ಮಿ ಎಲ್., 2024ನೇ ಸಾಲಿಗೆ ಚೈತನ್ಯ ಬಿ.ಆರ್. ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.