ADVERTISEMENT

ಟಿಎಪಿಎಂಎಸ್ ವಾರ್ಷಿಕ ಸಭೆ: ಷೇರು ಸಂಗ್ರಹ ಹೆಚ್ಚಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 14:18 IST
Last Updated 22 ಸೆಪ್ಟೆಂಬರ್ 2024, 14:18 IST
<div class="paragraphs"><p>ಗುಬ್ಬಿಯಲ್ಲಿ ಟಿಎಪಿಎಂಎಸ್ ವಾರ್ಷಿಕ ಸಭೆ ನಡೆಯಿತು</p></div>

ಗುಬ್ಬಿಯಲ್ಲಿ ಟಿಎಪಿಎಂಎಸ್ ವಾರ್ಷಿಕ ಸಭೆ ನಡೆಯಿತು

   

ಗುಬ್ಬಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ರೈತರಿಗೆ ಅನುಕೂಲವಾಗುವಂತೆ ಸಾವಯವ ಗೊಬ್ಬರ ಮಾರಾಟಕ್ಕೆ ಕ್ರಮ ಕೈಗೊಳ್ಳುವ ಜೊತೆಗೆ ಹೊಸ ಷೇರು ಸಂಗ್ರಹಕ್ಕೆ ಆದ್ಯತೆ ನೀಡಿದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಸಂಘದ ಸದಸ್ಯರು ಒಕ್ಕೊರಲಿನಿಂದ ಹೇಳಿದರು.

ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸದಸ್ಯರು ಹಲವು ಸಲಹೆ, ಸೂಚನೆಗಳನ್ನು ನೀಡಿದರು.

ADVERTISEMENT

ಸಂಘದ ಸದಸ್ಯರು ಮರಣ ಹೊಂದಿದಲ್ಲಿ ಪ್ರಸ್ತುತ ನೀಡುತ್ತಿರುವ ₹2 ಸಾವಿರವನ್ನು ₹5ಸಾವಿರಕ್ಕೆ ಹೆಚ್ಚಿಸಬೇಕು ಹಾಗೂ ಸಂಘದ ಸದಸ್ಯರಿಗೆ ನೀಡುವ ಲಾಭಾಂಶವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ರಾಮಚಂದ್ರು ಮಾತನಾಡಿ, ರೈತರ ಷೇರು ಹಣದಿಂದಲೇ ಅಭಿವೃದ್ಧಿ ಹೊಂದುತ್ತಿರುವ ಸಂಘ ರೈತ ಪರವಾಗಿದ್ದುಕೊಂಡು ರೈತರ ಸಲಹೆ ಸೂಚನೆಗಳನ್ನು ಅನುಸರಿಸಿ ನೆಡೆಯುವುದು. ರೈತ ಪರವಾಗಿದ್ದುಕೊಂಡು ಕಾರ್ಯನಿರ್ವಹಿಸಲು ಆಡಳಿತ ಮಂಡಳಿ ಬದ್ಧವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಇದ್ದು ಸಂಘವನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದರು.

ಸಂಘದ ಉಪಾಧ್ಯಕ್ಷ ಎಸ್.ಟಿ. ಅಂಜನಪ್ಪ ಮಾತನಾಡಿ, ಸಂಘದ ಶಿಥಿಲಗೊಂಡಿರುವ ಗೋದಾಮನ್ನು ದುರಸ್ತಿಗೊಳಿಸಲಾಗಿದೆ. ಸಂಘದಿಂದ ನಡೆಯುತ್ತಿರುವ ಜನತಾ ಬಜಾರನ್ನು ಉನ್ನತಿಕರಿಸಲು ಸಂಘವು ಕ್ರಿಯಾ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಭಾಕರ್, ನಿರ್ದೇಶಕರಾದ ಕಿಡಿಗಣ್ಣಪ್ಪ, ನಟರಾಜು, ರಮೇಶ್, ನಿರಂಜನ್ ಮೂರ್ತಿ, ತ್ರಿನೇಶ್, ವಸಂತ, ಮಾಲಮ್ಮ, ರೇಣುಕಾ ಪ್ರಸಾದ್, ಜಗದೀಶಯ್ಯ, ಪಂಚಾಕ್ಷರಿ, ಗಿರೀಶ್ ಕುಮಾರ್, ನಂಜೇಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಓಬಳೇಶ್, ಕಾರ್ಯದರ್ಶಿ ಶ್ರೀನಾಥ್, ಸದಸ್ಯರು ಹಾಗೂ ಸಂಘದ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.