ADVERTISEMENT

ತುಮಕೂರು: 20 ವರ್ಷದ ಹಿಂದೆ ನಡೆದಿತ್ತು ನಕ್ಸಲ್‌ ಹತ್ಯಾಕಾಂಡ

ವೆಂಕಟಮ್ಮನಹಳ್ಳಿ: ನಕ್ಸಲ್ ದಾಳಿಗೆ ಬಲಿಯಾಗಿದ್ದರು ಏಳು ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 15:37 IST
Last Updated 19 ನವೆಂಬರ್ 2024, 15:37 IST
<div class="paragraphs"><p>ಛತ್ತೀಸಗಡದಲ್ಲಿ ನಕ್ಸಲ್‌ ಕಾರ್ಯಾಚರಣೆ ( ಸಾಂಕೇತಿಕ ಚಿತ್ರ)</p></div>

ಛತ್ತೀಸಗಡದಲ್ಲಿ ನಕ್ಸಲ್‌ ಕಾರ್ಯಾಚರಣೆ ( ಸಾಂಕೇತಿಕ ಚಿತ್ರ)

   

ಪಿಟಿಐ

ತುಮಕೂರು: ಜಿಲ್ಲೆಯ ಆಂಧ್ರಪ್ರದೇಶದ ಗಡಿಭಾಗದಲ್ಲಿ ನಕ್ಸಲ್‌ ಚಟುವಟಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದ ಸಂದರ್ಭದಲ್ಲಿ ನಡೆದ ನಕ್ಸಲ್‌ ದಾಳಿಯಲ್ಲಿ ಏಳು ಪೊಲೀಸರು ಸೇರಿ ಎಂಟು ಜನ ಹತರಾಗಿದ್ದರು.

ADVERTISEMENT

2005ರ ಫೆಬ್ರುವರಿ 10ರಂದು ರಾತ್ರಿ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟಿದ್ದ ಕೆಎಸ್‌ಆರ್‌ಪಿ 9ನೇ ಕ್ಯಾಂಪ್‌ ಸಿಬ್ಬಂದಿ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ಲಾರಿಗಳಲ್ಲಿ ಬಂದಿಳಿದಿದ್ದ 300ಕ್ಕೂ ಹೆಚ್ಚು ನಕ್ಸಲರ ತಂಡ ಒಮ್ಮೆಲೆ ದಾಳಿ ನಡೆಸಿತ್ತು.

ಪೊಲೀಸರ ಬಳಿ ಇದ್ದ ಬಂದೂಕು, ಮದ್ದು ಗುಂಡುಗಳನ್ನು ದೋಚಿದ್ದರು. ನಂತರ ಮನ ಬಂದಂತೆ ಗುಂಡು ಹಾರಿಸಿದ್ದರು. ಇದರಲ್ಲಿ ಒಬ್ಬ ಖಾಸಗಿ ಬಸ್‌ ಕ್ಲೀನರ್‌ ಹಾಗೂ ಏಳು ಪೊಲೀಸರು ಮೃತಪಟ್ಟಿದ್ದರು. ದಾಳಿ ನಡೆಸಿದವರಲ್ಲಿ ಕೆಲವರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ.

ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಆರೋಪಿಗಳ ವಿರುದ್ಧ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಹೊರಡಿಸಿತ್ತು. ತೆಲುಗು ಕವಿಗಳಾದ ವರವರರಾವ್‌, ದಿ.ಗದ್ದರ್‌ ನಕ್ಸಲ್‌ ದಾಳಿಯ ಆರೋಪಿಗಳು. ಇವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಜಾಮೀನು ಪಡೆದು ಹೊರ ಬಂದಿದ್ದರು. ಇನ್ನೂ ಕೆಲ ಆರೋಪಿಗಳನ್ನು ಈಚೆಗೆ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.