ADVERTISEMENT

ಇಲ್ಲಿ ದಾನ, ಕೇಂದ್ರದ ಬಳಿ ಭಿಕ್ಷೆ: ಶಾಸಕ ಮುನಿರತ್ನ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2024, 7:06 IST
Last Updated 5 ಫೆಬ್ರುವರಿ 2024, 7:06 IST
ಶಾಸಕ ಮುನಿರತ್ನ
ಶಾಸಕ ಮುನಿರತ್ನ   

ತುಮಕೂರು: ‘ಕಾಂಗ್ರೆಸ್‌ ನಾಯಕರು ಗ್ಯಾರಂಟಿ ಹೆಸರಲ್ಲಿ ಇಲ್ಲಿ ದಾನ ಮಾಡಿ, ಕೇಂದ್ರದ ಬಳಿ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ’ ಎಂದು ಶಾಸಕ ಮುನಿರತ್ನ ಟೀಕಿಸಿದರು.

‘ಕಾಂಗ್ರೆಸ್‌ ನಾಯಕರು ಅಧಿಕಾರದ ದಾಹಕ್ಕಾಗಿ ಗ್ಯಾರಂಟಿ ಘೋಷಣೆ ಮಾಡಿದರು. ಗ್ಯಾರಂಟಿ ಮುಂದುವರಿಸಲು ಸರ್ಕಾರದ ಬಳಿ ಹಣವಿಲ್ಲ. ಮುಂದಿನ ಲೋಕಸಭಾ ಚುನಾವಣೆ ವೇಳೆ ಇನ್ನಷ್ಟು ಗ್ಯಾರಂಟಿ ಘೋಷಿಸಲು ಕೇಂದ್ರದಿಂದ ಹಣ ಕೇಳುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ನಿಲ್ಲಿಸುತ್ತಾರೆ’ ಎಂದರು.

ತಾಲ್ಲೂಕಿನ ಗೂಳೂರು ಹೋಬಳಿಯ ಗೌರಿಪುರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದಿಂದ ಬಂದ ಅನುದಾನ ಹಣದ ಲೆಕ್ಕ ಕೊಡದ ರಾಜ್ಯ ಸರ್ಕಾರ ಪ್ರತಿಭಟನೆ ಹೆಸರಿನಲ್ಲಿ ಚುನಾವಣೆ ನಾಟಕ ಶುರು ಮಾಡಿದೆ’ ಎಂದು ವಾಗ್ದಾಳಿ ನಡೆಸಿದರು. 

ADVERTISEMENT

‘ಸ್ವಾತಂತ್ರ್ಯನಂತರ ಮಹಮ್ಮದ್‌ ಅಲಿ ಜಿನ್ನಾ ದೇಶ ವಿಭಜನೆ ಮಾಡಿದರು. ಜಿನ್ನಾ ಪ್ರತಿರೂಪದಂತಿರುವ ಕಾಂಗ್ರೆಸ್‌ನವರು ಈಗ ದೇಶವನ್ನು ಮತ್ತೊಮ್ಮೆ ವಿಭಜಿಸಿ ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.