ADVERTISEMENT

ತುಮಕೂರು | ಮಾರುಕಟ್ಟೆ ವಿಶ್ಲೇಷಣೆ: ಟೊಮೆಟೊ, ಬೀನ್ಸ್ ದುಬಾರಿ

ಇಳಿಕೆಯತ್ತ ಸೊಪ್ಪು, ಬೇಳೆ, ಧಾನ್ಯ; ಹಣ್ಣು, ಕೋಳಿ ಮಾಂಸ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:39 IST
Last Updated 6 ಅಕ್ಟೋಬರ್ 2024, 4:39 IST
ಟೊಮೆಟೊ
ಟೊಮೆಟೊ   

ತುಮಕೂರು: ಟೊಮೆಟೊ, ಬೀನ್ಸ್ ಬೆಲೆ ಒಮ್ಮೆಲೆ ದುಪ್ಪಟ್ಟಾಗಿದ್ದರೆ, ಅಡುಗೆ ಎಣ್ಣೆ ಮತ್ತಷ್ಟು ದುಬಾರಿಯಾಗಿದೆ. ಸೊಪ್ಪು ಇನ್ನಷ್ಟು ಅಗ್ಗವಾಗಿದ್ದು, ಬೇಳೆ, ಧಾನ್ಯ ಅಲ್ಪ ಇಳಿಕೆ ಕಂಡಿದೆ.

ಟೊಮೆಟೊ ದುಬಾರಿ: ಈವರೆಗೆ ತೀವ್ರ ಕುಸಿತ ಕಂಡಿದ್ದ ಟೊಮೆಟೊ ಧಾರಣೆ ಕಳೆದ ಕೆಲ ವಾರಗಳಿಂದ ಚೇತರಿಕೆ ಕಾಣುತ್ತಿದ್ದು, ಈ ವಾರ ಒಮ್ಮೆಲೆ ಎರಡು ಪಟ್ಟು ಹೆಚ್ಚಳವಾಗಿದೆ. ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹60–70ಕ್ಕೆ ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಮಳೆಯಿಂದ ಬೆಳೆ ಹಾಳಾಗಿರುವುದು ಹಾಗೂ ಆವಕ ಕಡಿಮೆ ಇರುವುದರಿಂದ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಬೀನ್ಸ್ ಏರಿಕೆ: ಏರಿಳಿತ ಕಾಣುತ್ತಲೇ ಸಾಗಿರುವ ಬೀನ್ಸ್ ಬೆಲೆ ಒಮ್ಮೆಲೆ ದುಪ್ಪಟ್ಟಾಗಿದ್ದು, ಕೆ.ಜಿ ₹80–90ಕ್ಕೆ ಜಿಗಿದಿದೆ. ಚಿಲ್ಲರೆಯಾಗಿ ₹100ರ ವರೆಗೂ ಮಾರಾಟವಾಗುತ್ತಿದೆ. ಕೆಲವು ವಾರಗಳ ಹಿಂದೆ ಸಾಕಷ್ಟು ದುಬಾರಿಯಾಗಿದ್ದು, ಕೆಲ ದಿನಗಳ ಹಿಂದೆ ತೀವ್ರ ಕುಸಿತ ಕಂಡಿತ್ತು. ಈಗ ಆವಕ ಕಡಿಮೆಯಾಗಿದ್ದು, ಒಮ್ಮೆಲೆ ಏರಿಕೆಯಾಗಿದೆ. ಬೆಂಡೆ ಕಾಯಿ, ಬದನೆಕಾಯಿ, ತೊಂಡೆಕಾಯಿ, ಹೂಕೋಸು ಅಲ್ಪ ಹೆಚ್ಚಳವಾಗಿದೆ.

ADVERTISEMENT

ನುಗ್ಗೆ ಕಾಯಿ ಸಹ ದುಬಾರಿಯಾಗಿದ್ದು, ಶುಂಠಿ ದರ ಕೆ.ಜಿ ₹60–80ಕ್ಕೆ ಇಳಿಕೆಯಾಗಿದೆ. ನಿಂಬೆಹಣ್ಣು ಸಹ ಕಡಿಮೆಯಾಗಿದೆ.

ಸೊಪ್ಪು ಮತ್ತೆ ಅಗ್ಗ: ಸೊಪ್ಪಿನ ಬೆಲೆ ಇಳಿಕೆಯತ್ತಲೇ ಮುಖ ಮಾಡಿದ್ದು, ಈ ವಾರ ಸಬ್ಬಕ್ಕಿ, ಮೆಂತ್ಯ ಸೊಪ್ಪಿನ ದರ ಅರ್ಧದಷ್ಟು ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಮಾರಾಟವಾಗುತ್ತಿದೆ.

ಹಣ್ಣು: ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕಿತ್ತಳೆ, ಪಪ್ಪಾಯ, ಕಲ್ಲಂಗಡಿ ಅಲ್ಪ ಕಡಿಮೆಯಾಗಿದ್ದರೆ, ಸೀಬೆ ಏರಿಕೆಯಾಗಿದೆ. ಡ್ರಾಗನ್ ಫ್ರೂಟ್ ಕೆ.ಜಿ ₹50 ಇಳಿದಿದೆ.

ಅಡುಗೆ ಎಣ್ಣೆ ದುಬಾರಿ: ಏರಿಕೆಯತ್ತಲೇ ಸಾಗಿರುವ ಅಡುಗೆ ಎಣ್ಣೆ ಈ ವಾರವೂ ಹೆಚ್ಚಳ ದಾಖಲಿಸಿದೆ. ಗೋಲ್ಡ್‌ ವಿನ್ನರ್ ಕೆ.ಜಿ ₹128–130, ಪಾಮಾಯಿಲ್ ಕೆ.ಜಿ ₹120–121, ಕಡಲೆಕಾಯಿ ಎಣ್ಣೆ ಕೆ.ಜಿ ₹175–180ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ: ತೊಗರಿ ಬೇಳೆ ಸೇರಿದಂತೆ ಬೇಳೆ, ಧಾನ್ಯಗಳ ಧಾರಣೆ ಅಲ್ಪ ಪ್ರಮಾಣದಲ್ಲಿ ಇಳಿಕೆಯತ್ತ ಮುಖ ಮಾಡಿದೆ. ಉದ್ದಿನ ಬೇಳೆ, ಹೆಸರು ಕಾಳು, ಅಲಸಂದೆ, ಅವರೆಕಾಳು, ಹುರಿಗಡಲೆ ಕಡಿಮೆಯಾಗಿದೆ. ಬಟಾಣಿ ಬೆಲೆ ಏರಿಕೆಯತ್ತಲೇ ಸಾಗಿದೆ.

ಮಸಾಲೆ ಪದಾರ್ಥ: ಲವಂಗ, ಮೆಣಸು, ಜೀರಿಗೆ, ಗೌರಿಬಿದನೂರು ಮೆಣಸಿನಕಾಯಿ, ಬೆಲ್ಲದ ಬೆಲೆ ತುಸು ತಗ್ಗಿದೆ. ಏಲಕ್ಕಿ ದರವೂ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬಾದಾಮಿ, ಗೋಡಂಬಿ ದುಬಾರಿ ಸ್ಥಿತಿಯಲ್ಲೇ ಇದೆ.

ದನಿಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹170–180, ಹುಣಸೆಹಣ್ಣು ₹120–150, ಬೆಲ್ಲ ಕೆ.ಜಿ ₹50–55, ಕಾಳುಮೆಣಸು ಕೆ.ಜಿ ₹650–700, ಜೀರಿಗೆ ಕೆ.ಜಿ ₹310–320, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹800–850, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹2,500–2,600, ಬಾದಾಮಿ ಕೆ.ಜಿ ₹680–720, ಗೋಡಂಬಿ ಕೆ.ಜಿ ₹850–950, ಒಣದ್ರಾಕ್ಷಿ ಕೆ.ಜಿ ₹190–210ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಯಥಾಸ್ಥಿತಿ: ಈ ವಾರ ಕೋಳಿ ಮಾಂಸದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆಕೋಳಿ (ಫಾರಂ) ಕೆ.ಜಿ ₹130ಕ್ಕೆ ಸಿಗುತ್ತಿದೆ.

ದರ ಪಟ್ಟಿ.....

ಹಣ್ಣು (ಬೆಲೆ ಕೆ.ಜಿ ₹)

ಸೇಬು;150–280

ದಾಳಿಂಬೆ;250

ಮೂಸಂಬಿ;80

ಕಿತ್ತಳೆ;40–180

ಸಪೋಟ;100

ಏಲಕ್ಕಿ ಬಾಳೆ;90

ಪಚ್ಚಬಾಳೆ;40

ಸೀಬೆ(ತೈವಾನ್);140

ಪೈನಾಪಲ್;90

ಪಪ್ಪಾಯ;40

ಕರಬೂಜ;80

ಕಲ್ಲಂಗಡಿ;35

ದ್ರಾಕ್ಷಿ;130

ಕಪ್ಪು ದ್ರಾಕ್ಷಿ;150

ಸೀತಾಫಲ;300

ಡ್ರ್ಯಾಗನ್ ಫ್ರೂಟ್;250

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;145–160

ಕಡಲೆ ಬೇಳೆ;98–102

ಉದ್ದಿನ ಬೇಳೆ;130–135

ಹೆಸರು ಬೇಳೆ;110–115

ಕಡಲೆಕಾಳು;88–90

ಹೆಸರು ಕಾಳು;100–105

ಅಲಸಂದೆ;95–100

ಅವರೆಕಾಳು;120–140

ಹುರುಳಿಕಾಳು;75–80

ಹುರಿಗಡಲೆ;110–115

ಬಟಾಣಿ;175–180

ಕಡಲೆ ಬೀಜ;120–125

ಗೋಧಿ;42–46

ಸಕ್ಕರೆ;41–42

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;80–90

ಕ್ಯಾರೇಟ್;40–50

ಬೀಟ್ರೂಟ್‌;25–30

ಈರುಳ್ಳಿ;50–55

ಬೆಳ್ಳುಳ್ಳಿ;280–300

ಟೊಮೆಟೊ;60–70

ಆಲೂಗೆಡ್ಡೆ;35–40

ಗೆಡ್ಡೆಕೋಸು;40–50

ಮೂಲಂಗಿ;30–40

ಬೆಂಡೆಕಾಯಿ;25–30

ಬದನೆಕಾಯಿ;15–20

ಎಲೆಕೋಸು;10–15

ಹೂಕೋಸು(1ಕ್ಕೆ);40

ತೊಂಡೆಕಾಯಿ;25–30

ಹಾಗಲಕಾಯಿ;30–35

ನುಗ್ಗೆಕಾಯಿ;70–80

ಮೆಣಸಿನಕಾಯಿ;40–50

ಕ್ಯಾಪ್ಸಿಕಂ;40–50

ಶುಂಠಿ;60–80

ಸೌತೆಕಾಯಿ 1ಕ್ಕೆ;5–6

ನಿಂಬೆಹಣ್ಣು 1ಕ್ಕೆ;3–4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.