ತೋವಿನಕೆರೆ: ಮನೆ ಮತ್ತು ನೀರಿನ ತೆರಿಗೆ ವಸೂಲಿಗೆ ಕಷ್ಟ ಪಡುತ್ತಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ ಚುನಾವಣೆ ಸ್ಪರ್ಧಿಗಳಿಂದ ಸುಲಭವಾಗಿ ₹10 ಲಕ್ಷ ಕಂದಾಯ ಸಂಗ್ರಹಿಸಿದ್ದಾರೆ.
ತೋವಿನಕೆರೆಯಲ್ಲಿ ₹3 ಲಕ್ಷ, ಕುರಂಕೋಟೆಯಲ್ಲಿ ₹2.70 ಲಕ್ಷ, ಸಿದ್ಧರಬೆಟ್ಟ ₹2ಲಕ್ಷ, ಆಗ್ರಹಾರದಲ್ಲಿ ₹1.5 ಲಕ್ಷ ಮತ್ತು ಬುಕ್ಕಾಪಟ್ಟಣದಲ್ಲಿ ₹80 ಸಾವಿರ ಕಂದಾಯ ಒಂದು ವಾರದಲ್ಲಿ ಸಂಗ್ರಹವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಸೂಚಕರು ಪಂಚಾಯಿತಿಯಲ್ಲಿ ಯಾವುದೇ ರೀತಿಯ ತೆರಿಗೆ ಬಾಕಿ ಉಳಿಸಿಕೊಂಡಿರಬಾರದು. ನಾಮಪತ್ರದ ಜತೆ ತೆರಿಗೆ ಕಟ್ಟಿರುವ ದೃಢೀಕರಣ ಸಲ್ಲಿಸಬೇಕು.
ಕಳೆದ ಚುನಾವಣೆಯಲ್ಲಿ ವಸೂಲಿಯಾದ ಹಣಕ್ಕಿಂತ ಈ ಸಾಲಿನಲ್ಲಿ ಕಡಿಮೆ ಸಂಗ್ರಹವಾಗಿದೆ. ಕೊರಾನಾ ಸಮಯ ತೆರಿಗೆ ವಸೂಲಿ ಕಷ್ಟವಾಗಿತ್ತು. ಸದ್ಯ ಇಷ್ಟಾದರು ಆಗಿದೆ ಎನ್ನುವುದು ಸಮಾಧಾನ ಎನ್ನುತ್ತಾರೆ ಗ್ರಾಮ ಪಂಚಾಯಿತಿ ತೆರಿಗೆ ವಸೂಲಿದಾರರು.
ಸ್ಪರ್ಧಿಗಳು ಹೆಚ್ಚಾಗಿ ತಮ್ಮ ಕುಟುಂಬದವರನ್ನೇ ಸೂಚಕರನ್ನಾಗಿ ಮಾಡಿಕೊಂಡಿದ್ದಾರೆ. ಇದು ಸಹ ತೆರಿಗೆ ಸಂಗ್ರಹ ಕಡಿಮೆಯಾಗಲು ಕಾರಣ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.