ADVERTISEMENT

ತುಮಕೂರು: ಶೇ 62ರಷ್ಟು ಕೊಬ್ಬರಿ ಖರೀದಿ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 23 ಮೇ 2024, 13:43 IST
Last Updated 23 ಮೇ 2024, 13:43 IST
ಉಂಡೆ ಕೊಬ್ಬರಿ
ಉಂಡೆ ಕೊಬ್ಬರಿ   

ತುಮಕೂರು: ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆಯು ಸ್ವಲ್ಪಮಟ್ಟಿಗೆ ಚುರುಕು ಪಡೆದುಕೊಂಡಿದ್ದು, ಇಲ್ಲಿಯವರೆಗೆ ರೈತರಿಂದ 1,96,549 ಕ್ವಿಂಟಲ್ ಖರೀದಿ ಮಾಡಲಾಗಿದೆ.

ಏಪ್ರಿಲ್ 1ರಿಂದ ಖರೀದಿ ಆರಂಭವಾಗಿದ್ದು, ಏಪ್ರಿಲ್ ಕೊನೆಯ ವೇಳೆಗೆ ಶೇ 30ರಷ್ಟು ಖರೀದಿಸಲಾಗಿತ್ತು. ಮೇ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಚುರುಕು ಪಡೆದುಕೊಂಡಿದ್ದು, ಒಟ್ಟು ನೋಂದಣಿಯಲ್ಲಿ ಶೇ 62ರಷ್ಟು ಖರೀದಿಸಲಾಗಿದೆ. ಇನ್ನೂ 1,21,376 ಕ್ವಿಂಟಲ್ ಖರೀದಿಸಬೇಕಿದೆ. ಜೂನ್ ಅಂತ್ಯದ ವೇಳೆಗೆ ಖರೀದಿ ಪೂರ್ಣಗೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಜಿಲ್ಲೆಯಾದ್ಯಂತ 27,212 ರೈತರು, 3,17,917 ಕ್ವಿಂಟಲ್‌ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು, 26 ಕೇಂದ್ರಗಳಲ್ಲಿ ಖರೀದಿ ಮಾಡಲಾಗುತ್ತಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.