ADVERTISEMENT

ತುಮಕೂರು: ಎಂಜಿನಿಯರ್‌ಗೆ ₹13 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 6:16 IST
Last Updated 16 ಅಕ್ಟೋಬರ್ 2024, 6:16 IST
ಸೈಬರ್‌ ಕ್ರೈಂ
ಸೈಬರ್‌ ಕ್ರೈಂ   

ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಶಿರಾ ತಾಲ್ಲೂಕಿನ ಹೊನ್ನೇನಹಳ್ಳಿಯ ಎಚ್‌.ವಿ.ಹರೀಶ್‌ ಎಂಬ ಎಂಜಿನಿಯರ್‌ ₹13.75 ಲಕ್ಷ ಕಳೆದುಕೊಂಡಿದ್ದಾರೆ.

ವಾಟ್ಸ್‌ ಆ್ಯಪ್‌ ಮುಖಾಂತರ ಪರಿಚಯವಾದ ಸೈಬರ್‌ ಆರೋಪಿಗಳು ‘ಮೋತಿಲಾಲ್‌ ಒಸ್ವಾಲ್‌ ಇನ್‌ವೆಸ್ಟ್‌ ಕ್ಲಬ್‌ ಕೆ–889’ ಎಂಬ ಗ್ರೂಪ್‌ನಲ್ಲಿ ಮಾರುಕಟ್ಟೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಹಣ ವರ್ಗಾಯಿಸಿದ ನಂತರ ಲಾಭದ ಹಣ ನೀಡಲು ಜಿಎಸ್‌ಟಿ, ತೆರಿಗೆ ಕಟ್ಟಬೇಕು ಎಂದಿದ್ದಾರೆ.

ಇದನ್ನು ನಂಬಿದ ಹರೀಶ್‌ ಸೈಬರ್‌ ವಂಚಕರು ತಿಳಿಸಿದ ವಿವಿಧ ಯುಪಿಐ ಐಡಿ ಮತ್ತು ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹13,75,226 ವರ್ಗಾವಣೆ ಮಾಡಿದ್ದಾರೆ. ಸ್ನೇಹಿತರು ಮತ್ತು ಪತ್ನಿಯ ಖಾತೆಯಿಂದಲೂ ಹಣ ಹಾಕಿದ್ದಾರೆ. ಲಾಭದ ಆಮಿಷ ತೋರಿಸಿ ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.