ADVERTISEMENT

ತುಮಕೂರು | ಕಬ್ಬಿಣ ಪೂರೈಕೆ: ₹14 ಲಕ್ಷ ವಂಚನೆ

RAJANI M
Published 17 ಆಗಸ್ಟ್ 2024, 5:59 IST
Last Updated 17 ಆಗಸ್ಟ್ 2024, 5:59 IST
   

ತುಮಕೂರು: ರಿಯಾಯಿತಿ ದರದಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಕಬ್ಬಿಣ ಪೂರೈಸುವುದಾಗಿ ನಂಬಿಸಿ ಶಿರಾಗೇಟ್ ನಿವಾಸಿ ವಿ.ಆರ್.ರಾಜಣ್ಣ ಎಂಬುವರಿಗೆ ₹14.12 ಲಕ್ಷ ವಂಚಿಸಲಾಗಿದೆ.

ರಾಜಣ್ಣ ಅಂತರಸನ ಹಳ್ಳಿಯಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಗೂಗಲ್‌ನಲ್ಲಿ ‘ವೈಜಾಖ್‌ ಸ್ಟೀಲ್’ ಎಂಬ ಕಂಪನಿಯಿಂದ ರಿಯಾಯಿತಿ ದರದಲ್ಲಿ ಕಬ್ಬಿಣ ಪೂರೈಸಲಾಗುವುದು ಎಂಬ ಜಾಹೀರಾತು ನೋಡಿದ್ದರು. ಅದರಲ್ಲಿನ ಮೊಬೈಲ್ ಸಂಖ್ಯೆ ಸಂಪರ್ಕಿಸಿದ್ದು, ಸದರಿ ಕಂಪನಿಯವರು ಕೊಟೇಶನ್ ಕಳುಹಿಸಿದ್ದರು. ನಂತರ 29 ಟನ್ ಕಬ್ಬಿಣ ತರಿಸಿಕೊಳ್ಳಲು ತೀರ್ಮಾನಿಸಿದ್ದರು. ಕಂಪನಿಯವರು ಮೊದಲು ಹಣ ಪಾವತಿಸುವಂತೆ ತಿಳಿಸಿದ್ದಾರೆ. ಅವರು ಹೇಳಿದ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ₹14,12,866 ವರ್ಗಾಯಿಸಿದ್ದಾರೆ.

ಕಂಪನಿಯವರ ಜತೆ ಮಾತನಾಡಿದಾಗ ಹಣ ತಲುಪಿದೆ, ಹೆಚ್ಚಿನ ಮಾಹಿತಿಗೆ ಟ್ರಾನ್ಸ್‌ ಪೋರ್ಟ್‌ ಸೆಕ್ಷನ್‌ ಸಂಪರ್ಕಿಸುವಂತೆ ತಿಳಿಸಿದ್ದಾರೆ. ಅಲ್ಲಿ ವಿಚಾರಿಸಿದರೆ ನಿಮ್ಮ ವಿಳಾಸಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ. ಆದರೆ, ಯಾವುದೇ ಕಬ್ಬಿಣ ಬಂದಿಲ್ಲ. ರಿಯಾಯಿತಿ ದರದಲ್ಲಿ ಕಬ್ಬಿಣ ಪೂರೈಸುವುದಾಗಿ ನಂಬಿಸಿ ಮೋಸ ಮಾಡಿದವರನ್ನು ಪತ್ತೆ ಹಚ್ಚುವಂತೆ ಕೋರಿ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.