ತುಮಕೂರು: ಕಾಂಗ್ರೆಸ್– ಜೆಡಿಎಸ್ ನಡುವೆ ಸ್ಥಾನ ಹಂಚಿಕೆಯ ಹಗ್ಗಜಗ್ಗಾಟದಲ್ಲಿರುವ ಕ್ಷೇತ್ರಗಳಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಸಹ ಒಂದು. ಹಿಂದೆ ನಾಲ್ಕು ಬಾರಿ ಗೆದ್ದು, ಭದ್ರ ನೆಲೆ ಹೊಂದಿರುವ ಬಿಜೆಪಿ ಈ ಬಾರಿ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯತಂತ್ರ ಹೆಣೆಯುತ್ತಿದೆ.
1996ರ ಚುನಾವಣೆಯಲ್ಲಿ ಜನತಾದಳದಿಂದ ಸಿ.ಎನ್.ಭಾಸ್ಕರಪ್ಪ ಗೆಲುವು ಸಾಧಿಸಿದ್ದರು. ಆ ನಂತರ ದಳಪತಿಗಳು ಕಲ್ಪತರು ನೆಲದಿಂದ ಲೋಕಸಭೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಕ್ಷೇತ್ರದ ಇತಿಹಾಸದಲ್ಲಿ ಕಾಂಗ್ರೆಸ್ 11 ಬಾರಿ ಗೆಲುವು ಕಂಡಿದೆ. ಕಳೆದ ಎರಡು ದಶಕಗಳಿಂದ ಕಾಂಗ್ರೆಸ್– ಬಿಜೆಪಿ ಪಕ್ಷಗಳ ನಡುವೆಯೇ ಸೋಲು–ಗೆಲುವು ಸಾಗುತ್ತಿದೆ.
ಮೈತ್ರಿಯ ಭಾಗವಾಗಿ ಕಾಂಗ್ರೆಸ್, ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡುವುದೇ? ಬಿಟ್ಟು ಕೊಟ್ಟರೆ ಮೈತ್ರಿ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗಳ ಸುತ್ತ ಜಿಲ್ಲೆಯ ರಾಜಕಾರಣದ ಚರ್ಚೆ ಗಿರಕಿ ಹೊಡೆಯುತ್ತಿದೆ.ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿದರೆ ತನ್ನ ಅಭ್ಯರ್ಥಿ ಆಯ್ಕೆ ಮತ್ತು ತಂತ್ರಗಾರಿಕೆಯಲ್ಲಿ ಬಿಜೆಪಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಲುಕಲಿದೆ.
–––
ಆಕಾಂಕ್ಷಿಗಳು
ಕಾಂಗ್ರೆಸ್: ಎಸ್.ಪಿ.ಮುದ್ದಹನುಮೇಗೌಡ
ಬಿಜೆಪಿ: ಜಿ.ಎಸ್.ಬಸವರಾಜು, ಬಿ.ಸುರೇಶ್ ಗೌಡ, ಸೊಗಡು ಶಿವಣ್ಣ
ಕರ್ನಾಟಕ ಜನತಾ ರಂಗ: ಭಟ್ಟರಹಳ್ಳಿ ಮಲ್ಲಿಕಾರ್ಜುನ್
ಮತದಾರರ ಸಂಖ್ಯೆ: 15,94,703
ವಿಧಾನಸಭಾ ಕ್ಷೇತ್ರವಾರು ಬಲಾಬಲ
ಒಟ್ಟು–8
ಬಿಜೆಪಿ: ತುಮಕೂರು ನಗರ, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ
ಕಾಂಗ್ರೆಸ್: ಕೊರಟಗೆರೆ
ಜೆಡಿಎಸ್: ತುಮಕೂರು ಗ್ರಾಮಾಂತರ, ಮಧುಗಿರಿ, ಗುಬ್ಬಿ
ಹಿಂದಿನ ಚುನಾವಣಾ ಲೆಕ್ಕಾಚಾರ
2009
ವಿಜೇತರು: ಜಿ.ಎಸ್.ಬಸವರಾಜು. ಗೆಲುವಿನ ಅಂತರ–21,445
ಜಿ.ಎಸ್.ಬಸವರಾಜು; ಬಿಜೆಪಿ; ಶೇ 36.79
ಎಸ್.ಪಿ.ಮುದ್ದಹನುಮೇಗೌಡ; ಜೆಡಿಎಸ್; ಶೇ 34.41
ಪಿ.ಕೋದಂರಾಮಯ್ಯ; ಕಾಂಗ್ರೆಸ್ ಶೇ 19.75
ಇತರೆ ;ಶೇ 4.16
2014
ವಿಜೇತರು: ಎಸ್.ಪಿ.ಮುದ್ದಹನುಮೇಗೌಡ. ಗೆಲುವಿನ ಅಂತರ–74,041
ಕಾಂಗ್ರೆಸ್: ಎಸ್.ಪಿ.ಮುದ್ದಹನುಮೇಗೌಡ–ಶೇ 39.03
ಬಿಜೆಪಿ: ಜಿ.ಎಸ್.ಬಸವರಾಜು–ಶೇ 32.03
ಜೆಡಿಎಸ್: ಎ.ಕೃಷ್ಣಪ್ಪ–ಶೇ 23.48
ಇತರೆ; ಶೇ 3.48
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.