ADVERTISEMENT

ತುಮಕೂರು | ಇಳಿಕೆಯತ್ತ ತರಕಾರಿ; ಮೆಣಸಿನಕಾಯಿ ‘ಖಾರ’

ಬೇಳೆ ಇಳಿಕೆ, ಕೊತ್ತಂಬರಿ ಸೊಪ್ಪು ಕುಸಿತ; ಹಣ್ಣು ಬೆಲೆ ಸ್ಥಿರ; ಗೋಡಂಬಿ ದುಬಾರಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 4:54 IST
Last Updated 7 ಜುಲೈ 2024, 4:54 IST
ಹಸಿ ಮೆಣಸಿನಕಾಯಿ
ಹಸಿ ಮೆಣಸಿನಕಾಯಿ   

ತುಮಕೂರು: ಈ ವಾರ ತರಕಾರಿ ಬೆಲೆ ಇಳಕೆಯತ್ತ ಸಾಗಿದ್ದರೆ, ಹಸಿರು ಮೆಣಸಿನಕಾಯಿ ದುಬಾರಿಯಾಗಿದೆ. ಕೊತ್ತಂಬರಿ ಸೊಪ್ಪು ಅಗ್ಗವಾಗಿದೆ. ಬೇಳೆ, ಧಾನ್ಯಗಳ ದರವೂ ಇಳಿಕೆಯತ್ತ ಸಾಗಿದ್ದು, ಹಣ್ಣು, ಕೋಳಿ ಮಾಂಸದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಇಳಿಕೆಯತ್ತ ತರಕಾರಿ: ಕೆಲ ವಾರಗಳಿಂದ ಕೆ.ಜಿ ₹100 ದಾಟಿದ್ದ ಕೆಲವು ತರಕಾರಿಗಳ ದರ ನಿಧಾನವಾಗಿ ತಗ್ಗುತ್ತಿದೆ. ಬೀನ್ಸ್ ಕೆ.ಜಿ ₹50–60ಕ್ಕೆ ಇಳಿಕೆ ಕಂಡಿದೆ. ಕ್ಯಾರೇಟ್, ಬೀಟ್ರೂಟ್, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗೆಡ್ಡೆಕೋಸು ಮತ್ತೆ ಏರಿಕೆಯಾಗಿದ್ದು, ಹೂ ಕೋಸು, ನುಗ್ಗೆಕಾಯಿ ದರ ತುಸು ಹೆಚ್ಚಳವಾಗಿದೆ. ಆದರೆ ಹಸಿರು ಮೆಣಸಿನಕಾಯಿ ಮತ್ತಷ್ಟು ‘ಖಾರ’ವಾಗಿದ್ದು ಕೆ.ಜಿ ₹70–80ಕ್ಕೆ ತಲುಪಿದೆ. ಕ್ಯಾಪ್ಸಿಕಂ ಸಹ ಇದೇ ದಾರಿಯಲ್ಲಿ ಸಾಗಿದೆ.

ಏರಿಳಿತ ಕಂಡ ಟೊಮೊಟೊ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಈರುಳ್ಳಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳುಳ್ಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಶುಂಠಿ, ಸೌತೆಕಾಯಿ ಸಹ ಇಳಿದಿದೆ.

ADVERTISEMENT

ಆಷಾಢ ಮಾಸ ಆರಂಭವಾಗಿದ್ದು, ಶುಭ ಕಾರ್ಯಗಳು ನಡೆಯುತ್ತಿಲ್ಲ. ತರಕಾರಿಗೂ ಬೇಡಿಕೆ ತಗ್ಗಿದ್ದು, ಬೆಲೆಯೂ ಇಳಿಯುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಕೊತ್ತಂಬರಿ ಸೊಪ್ಪು ಅಗ್ಗ: ಎರಡು ವಾರದಿಂದ ಇಳಿಕೆಯತ್ತ ಮುಖಮಾಡಿದ್ದ ಕೊತ್ತಂಬರಿ ಸೊಪ್ಪು ಈಗ ಪಾತಾಳ ಮುಟ್ಟಿದೆ. ಉಳಿದ ಸೊಪ್ಪಿನ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹50–60, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಹಣ್ಣು ಯಥಾಸ್ಥಿತಿ: ಹಣ್ಣು ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಸೀಬೆ ಹಣ್ಣು ಅಲ್ಪ ಏರಿಕೆಯಾಗಿದೆ. ಆಷಾಢ ಮಾಸ ಬಂದಿದ್ದು, ಈ ಸಮಯದಲ್ಲಿ ಬೆಲೆ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ತೋತಾಪುರಿ ಮಾವು ಕೆ.ಜಿ ₹100, ಬೇನಿಷಾ ಕೆ.ಜಿ ₹100ಕ್ಕೆ ಸಿಗುತ್ತಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ದರದಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹87–88, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ ಇಳಿಕೆ: ಮಾರ್ಚ್ ತಿಂಗಳಿಂದ ಏರುಗತಿಯಲ್ಲೇ ಇದ್ದ ಬೇಳೆ, ಧಾನ್ಯಗಳ ಧಾರಣೆ ನಿಧಾನವಾಗಿ ಕಡಿಮೆಯಾಗುತ್ತಿದೆ. ಬಹುತೇಕ ಬೇಳೆಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಅವರೆಕಾಳು, ಬಟಾಣಿ ಮಾತ್ರ ತುಸು ಏರಿಕೆ ದಾಖಲಿಸಿದೆ. ಸಕ್ಕರೆ ಅಲ್ಪ ಇಳಿಕೆಯಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳಲ್ಲಿ ಮೆಣಸು, ಜೀರಿಗೆ, ಹುಣಸೆಹಣ್ಣು ಏರಿಕೆಯತ್ತಲೇ ಮುಖ ಮಾಡಿವೆ. ಏಲಕ್ಕಿ ಕೊಂಚ ಕಡಿಮೆಯಾಗಿದ್ದರೆ, ಗೋಡಂಬಿ ಮತ್ತಷ್ಟು ದುಬಾರಿಯಾಗಿದೆ.

ಧನ್ಯ ಕೆ.ಜಿ ₹100–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹220–280, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–260, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹740–780, ಜೀರಿಗೆ ಕೆ.ಜಿ ₹330–360, ಸಾಸಿವೆ ಕೆ.ಜಿ ₹80, ಮೆಂತ್ಯ ಕೆ.ಜಿ ₹85, ಚಕ್ಕೆ ಕೆ.ಜಿ ₹270, ಲವಂಗ ಕೆ.ಜಿ ₹920–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,280, ಏಲಕ್ಕಿ ಕೆ.ಜಿ ₹2,800–3,200, ಬಾದಾಮಿ ಕೆ.ಜಿ ₹620–660, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹190–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮಾಂಸ: ಕೋಳಿ ಮಾಂಸದ ಬೆಲೆ ಈ ವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹240, ಸ್ಕಿನ್‌ಲೆಸ್ ಕೆ.ಜಿ ₹260, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.

ಮೀನು: ಮುಂಗಾರು ಮಳೆ ಆರಂಭವಾಗಿದ್ದು, ಮೀನುಗಾರಿಕೆ ಚಟುವಟಿಕೆಗಳು ಕಡಿಮೆಯಾಗಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಹಣ್ಣು (ಬೆಲೆ ಕೆ.ಜಿ ₹)

ಸೇಬು;200

ದಾಳಿಂಬೆ;200

ಮೂಸಂಬಿ;100

ಕಿತ್ತಳೆ;150

ಸಪೋಟ;100

ಏಲಕ್ಕಿ ಬಾಳೆ;85

ಪಚ್ಚಬಾಳೆ;37

ಸೀಬೆ;140

ಪೈನಾಪಲ್;100

ಪಪ್ಪಾಯ;30

ಕರಬೂಜ;50

ಕಲ್ಲಂಗಡಿ;30

ದ್ರಾಕ್ಷಿ;50

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;168–175

ಕಡಲೆ ಬೇಳೆ;86–90

ಉದ್ದಿನ ಬೇಳೆ;125–140

ಹೆಸರು ಬೇಳೆ;110–120

ಕಡಲೆಕಾಳು;80–85

ಹೆಸರು ಕಾಳು;110–125

ಅಲಸಂದೆ;105–110

ಅವರೆಕಾಳು;160–170

ಹುರುಳಿಕಾಳು;76–85

ಹುರಿಗಡಲೆ;100–105

ಬಟಾಣಿ;125

ಕಡಲೆ ಬೀಜ;110–125

ಗೋಧಿ;42–48

ಸಕ್ಕರೆ;40–41

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;50–60

ಕ್ಯಾರೇಟ್;50–60

ಬೀಟ್ರೂಟ್‌;35–40

ಈರುಳ್ಳಿ;30–35

ಬೆಳ್ಳುಳ್ಳಿ;180–200

ಟೊಮೆಟೊ;30–35

ಆಲೂಗಡ್ಡೆ;35–40

ಗೆಡ್ಡೆಕೋಸು;50–60

ಮೂಲಂಗಿ;30–40

ಬೆಂಡೆಕಾಯಿ;30–40

ಬದನೆಕಾಯಿ;30–40

ಎಲೆಕೋಸು;35–40

ಹೂಕೋಸು(1ಕ್ಕೆ);40–50

ತೊಂಡೆಕಾಯಿ;30–35

ಹಾಗಲಕಾಯಿ;50–60

ನುಗ್ಗೆಕಾಯಿ;100–120

ಮೆಣಸಿನಕಾಯಿ;70–80

ಕ್ಯಾಪ್ಸಿಕಂ;50–60

ಶುಂಠಿ;100–120

ಸೌತೆಕಾಯಿ 1ಕ್ಕೆ;5–6

ನಿಂಬೆಹಣ್ಣು 1ಕ್ಕೆ;4–5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.