ADVERTISEMENT

ತುಮಕೂರು: ಕ್ರೀಡಾಕೂಟಕ್ಕೆ ₹1.78 ಕೋಟಿ ವೆಚ್ಚ

ರಸಾಯನಶಾಸ್ತ್ರ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 4:24 IST
Last Updated 14 ಆಗಸ್ಟ್ 2024, 4:24 IST
<div class="paragraphs"><p>ತುಮಕೂರು ವಿಶ್ವವಿದ್ಯಾಲಯದ&nbsp;ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗವು ಸಮಗ್ರ ಪ್ರಶಸ್ತಿ ಪಡೆಯಿತು. </p></div>

ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದಲ್ಲಿ ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗವು ಸಮಗ್ರ ಪ್ರಶಸ್ತಿ ಪಡೆಯಿತು.

   

ತುಮಕೂರು: ವಿಶ್ವವಿದ್ಯಾಲಯದ ಕ್ರೀಡಾ ಬಜೆಟ್ ₹1.78 ಕೋಟಿಗೆ ಏರಿಕೆ ಮಾಡಲಾಗಿದೆ ಎಂದು ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.

ವಿ.ವಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ ಅಂತರ ವಿಭಾಗಗಳ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ಕ್ರೀಡಾ ಮನೋಭಾವ ಇರುವ ವಿದ್ಯಾರ್ಥಿಗಳಲ್ಲಿ ಮಾನಸಿಕ, ದೈಹಿಕ ಆರೋಗ್ಯ ಕಾಣಬಹುದು. ನಾಲ್ಕು ಗೋಡೆಗಳಿಗೆ ಬದುಕು ಸೀಮಿತವಾದರೆ ಸಾಧಿಸಲು ಸಾಧ್ಯವಿಲ್ಲ. ಅವಕಾಶ, ವೇದಿಕೆಗಳನ್ನು ಬಳಸಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಅಂತರರಾಷ್ಟ್ರೀಯ ಕ್ರೀಡಾಪಟು ಎಸ್‌.ಸತ್ಯವತಿ, ‘ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುವುದು ತುಂಬಾ ಕಷ್ಟ. ನಮ್ಮ ಕನಸಿನ ಮೇಲೆ ಹೆಚ್ಚು ಶ್ರಮವಹಿಸಿದರೆ ಯಶಸ್ವಿಯಾಗುತ್ತೇವೆ’ ಎಂದರು.

ವಿ.ವಿಯ ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗವು ಸಮಗ್ರ ಪ್ರಶಸ್ತಿ ಪಡೆಯಿತು. ಏಕವ್ಯಕ್ತಿ ಕ್ರೀಡಾ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕನ್ನಡ ವಿಭಾಗದ ಎಲ್‌.ಎನ್‌.ನಂದನ್‌ ಕುಮಾರ್‌ ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ನಾತಕೋತ್ತರ ಸಾವಯವ ರಸಾಯನಶಾಸ್ತ್ರ ವಿಭಾಗದ ವೈ.ಎನ್‌.ಸ್ಫೂರ್ತಿ ಗರಿಷ್ಠ ಪ್ರಶಸ್ತಿ ಪಡೆದರು.

ಕುಲಸಚಿವರಾದ ನಾಹಿದಾ ಜಮ್‌ ಜಮ್‌, ಪ್ರೊ.ಕೆ.ಪ್ರಸನ್ನಕುಮಾರ್‌, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಎ.ಎಂ.ಮಂಜುನಾಥ, ಸಹಾಯಕ ಪ್ರಾಧ್ಯಾಪಕ ಕೆ.ಎನ್‌.ಚೇತನ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.