ADVERTISEMENT

ತುಮಕೂರು | ಜನರ ಜತೆ ವಾಯುವಿಹಾರ ಮಾಡಿದ ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 4:57 IST
Last Updated 7 ಜುಲೈ 2024, 4:57 IST
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಕ್ರೀಡಾಪಟುಗಳ ಜತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಮಾಲೋಚನೆ ನಡೆಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಇತರರು ಭಾಗವಹಿಸಿದ್ದರು
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ಕ್ರೀಡಾಪಟುಗಳ ಜತೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸಮಾಲೋಚನೆ ನಡೆಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಇತರರು ಭಾಗವಹಿಸಿದ್ದರು   

ತುಮಕೂರು: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಮುಂಜಾನೆ ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ಸಾರ್ವಜನಿಕರೊಂದಿಗೆ ವಾಯುವಿಹಾರ ಮಾಡಿ, ಜನರ ಸಮಸ್ಯೆ ಆಲಿಸಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿ.ವಿ ಆವರಣದಲ್ಲಿ ವಾಯುವಿಹಾರ ಮಾಡಿ ಮತಯಾಚಿಸಿದ್ದರು. ಈಗ ಅವರ ಸಮಸ್ಯೆಗಳನ್ನು ಕೇಳಲು ಬಂದಿದ್ದರು. ಆಹವಾಲು ಸ್ವೀಕರಿಸಿ, ಪರಿಹಾರದ ಭರವಸೆ ನೀಡಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಜತೆಯಲ್ಲಿದ್ದರು.

ಇದೇ ವೇಳೆ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿನೀಡಿ, ಕ್ರೀಡಾಪಟುಗಳು, ಕ್ರೀಡಾ ತರಬೇತುದಾರರ ಜತೆ ಸಮಾಲೋಚನೆ ನಡೆಸಿದರು. ನಗರದಲ್ಲಿ ಕ್ರೀಡಾ ಚುಟುವಟಿಕೆಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನಗರದ ಕ್ರೀಡಾ ವಸತಿ ನಿಲಯಕ್ಕೆ ಹೆಚ್ಚಿನ ಸವಲತ್ತು ದೊರಕಿಸಿಕೊಡಬೇಕು. ರೈಲ್ವೆಯ ಉದ್ಯೋಗ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಕ್ರೀಡಾಪಟು ಟಿ.ಕೆ.ಆನಂದ್, ತರಬೇತುದಾರರದ ಇಸ್ಮಾಯಿಲ್, ರಾಜ್‍ಕುಮಾರ್, ಪ್ರಮುಖರಾದ ಧನಿಯಾಕುಮಾರ್, ಹೆಬ್ಬಾಕ ಮಲ್ಲಿಕಾರ್ಜುನ್, ಬೆಸ್ಟೆಕ್ಸ್ ರಾಮರಾಜು, ಎಚ್.ವೀರಭದ್ರಯ್ಯ, ಕೊಪ್ಪಲ್ ನಾಗರಾಜು, ಗೋಕುಲ್ ಮಂಜುನಾಥ್, ದಿನೇಶ್ ಮೊದಲಾದವರು ಹಾಜರಿದ್ದರು.

ಬಿಜೆಪಿ ಮುಖಂಡರಾದ ಎಚ್.ಎಸ್.ರವಿಶಂಕರ್, ಎಸ್.ಪಿ.ಚಿದಾನಂದ್, ಬಿ.ಎಸ್.ನಾಗೇಶ್, ಬ್ಯಾಟರಂಗೇಗೌಡ, ಸಂದೀಪ್‍ಗೌಡ, ನವಚೇತನ್, ಧನುಷ್ ನಾಯಕ್, ರುದ್ರೇಶ್, ಗಣೇಶ್‍ಪ್ರಸಾದ್, ಮಲ್ಲಿಕಾರ್ಜುನ್, ಅಂಜನ್‍ಮೂರ್ತಿ, ಮಧುಕುಮಾರ್, ಲೋಕೇಶಯ್ಯ ಇತರರು ಸಚಿವರ ಜತೆಯಲ್ಲಿದ್ದರು.

ರೈಲ್ವೆ ಅಂಡರ್‌ಪಾಸ್‌ಗೆ ಆಗ್ರಹ

ನಗರದ ರೈಲ್ವೆ ನಿಲ್ದಾಣ ಸಮೀಪ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡುವಂತೆ ಆ ಭಾಗದ ನಾಗರಿಕರು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದರು. ಅಂಡರ್ ಪಾಸ್ ನಿರ್ಮಾಣ ಮಾಡಿದರೆ ಬನಶಂಕರಿ ಶಾಂತಿನಗರ ಅಮರಜ್ಯೋತಿ ನಗರ ಸರಸ್ವತಿಪುರಂ ಮರಳೂರು ದಿಣ್ಣೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗಲಿದೆ ಎಂದು ಮುಖಂಡ ಬನಶಂಕರಿ ಬಾಬು ಇತರರು ಮನವಿ ಮಾಡಿದರು.

ಹಿರಿಯರಿಗೆ ರಿಯಾಯಿತಿ

ರೈಲು ಪ್ರಯಾಣ ದರದಲ್ಲಿ ಹಿಂದೆ ಹಿರಿಯ ನಾಗರಿಕರಿಗೆ ರಿಯಾಯಿತಿ ಕೊಡುತ್ತಿದ್ದು ಈಗ ಅದನ್ನು ಮುಂದುವರಿಸುವಂತೆ ಹಿರಿಯ ನಾಗರಿಕ ಎನ್.ಎಸ್.ಪಂಡಿತ್ ಮನವಿ ಮಾಡಿದ್ದಾರೆ. ಕೋವಿಡ್ ವೇಳೆ ಈ ರಿಯಾಯಿತಿ ನಿಲ್ಲಿಸಲಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಮತ್ತೆ ಮುಂದುವರಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.