ADVERTISEMENT

ತುಮಕೂರು | ಸೊಪ್ಪು ಮತ್ತೆ ದುಬಾರಿ; ಶುಂಠಿ ಏರಿಕೆ

ಪಾಮಾಯಿಲ್ ಇಳಿಕೆ; ಕೋಳಿ ಮಾಂಸ ಅಲ್ಪ ಅಗ್ಗ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 7:45 IST
Last Updated 24 ಮಾರ್ಚ್ 2024, 7:45 IST
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು   

ತುಮಕೂರು: ಸೊಪ್ಪಿನ ಬೆಲೆ ಮತ್ತೆ ಏರಿಕೆಯತ್ತ ಸಾಗಿದ್ದರೆ, ಕೆಲವು ತರಕಾರಿಗಳ ದರ ಇಳಿಕೆಯಾಗಿದೆ. ಶುಂಠಿ ದುಬಾರಿಯಾಗಿದ್ದು, ಪಾಮಾಯಿಲ್ ಎಣ್ಣೆ ಇಳಿದಿದ್ದು, ಜೀರಿಗೆ ಮತ್ತೆ ಇಳಿಕೆ ಕಂಡಿದೆ. ಕೋಳಿ ಮಾಂಸದ ಧಾರಣೆ ಕಡಿಮೆಯಾಗಿದೆ.

ಶುಂಠಿ ದುಬಾರಿ: ಕಳೆದ ಎರಡು ವಾರದಿಂದ ಶುಂಠಿ ದರ ಹೆಚ್ಚುತ್ತಲೇ ಸಾಗಿದ್ದು, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ಕೆಲವು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದವುಗಳ ಬೆಲೆ ಕಡಿಮೆಯಾಗಿದೆ. ಬೀಟ್ರೂಟ್, ಗೆಡ್ಡೆಕೋಸು, ಮೂಲಂಗಿ, ಬದನೆಕಾಯಿ ಸ್ವಲ್ಪ ಹೆಚ್ಚಳವಾಗಿದ್ದರೆ, ತೊಂಡೆಕಾಯಿ, ಹಾಗಲಕಾಯಿ, ನುಗ್ಗೇಕಾಯಿ ದರ ಇಳಿಕೆಯಾಗಿದೆ. ಹಸಿರು ಮೆಣಸಿನ ಕಾಯಿ ಧಾರಣೆ ಕೆ.ಜಿ ₹50–60ಕ್ಕೆ ಏರಿಕೆಯಾಗಿದ್ದು, ಅದೇ ಸ್ಥಿತಿಯಲ್ಲಿ ಮುಂದುವರಿದಿದೆ.

ಸೊಪ್ಪು ಮತ್ತೆ ಏರಿಕೆ: ಬೇಸಿಗೆ ಆರಂಭವಾಗುತ್ತಿದ್ದಂತೆ ಸೊಪ್ಪುಗಳ ಧಾರಣೆ ಏರಿಕೆಯತ್ತ ಮುಖ ಮಾಡಿದ್ದು, ಕೊತ್ತಂಬರಿ, ಮೆಂತ್ಯ ಸೊಪ್ಪು ಮತ್ತಷ್ಟು ಹೆಚ್ಚಳವಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹50–60, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ADVERTISEMENT

ಕಲ್ಲಂಗಡಿ ಹೆಚ್ಚಳ: ಬೇಸಿಗೆಯಲ್ಲಿ ಜನರು ಹೆಚ್ಚಾಗಿ ಬಳಕೆ ಮಾಡುವ ಕಲ್ಲಂಗಡಿ ಹಣ್ಣು ದರ ಹೆಚ್ಚಳವಾಗಿದ್ದು, ಪಪ್ಪಾಯ, ದ್ರಾಕ್ಷಿ ಹಣ್ಣಿನ ಬೆಲೆ ಸಹ ಏರಿಕೆಯಾಗಿದೆ. ಇತರೆ ಹಣ್ಣುಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.

ಪಾಮಾಯಿಲ್ ಇಳಿಕೆ: ಅಡುಗೆ ಎಣ್ಣೆಯಲ್ಲಿ ಪಾಮಾಯಿಲ್ ಧಾರಣೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹110, ಪಾಮಾಯಿಲ್ ಕೆ.ಜಿ ₹92, ಕಡಲೆಕಾಯಿ ಎಣ್ಣೆ ಕೆ.ಜಿ ₹150ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಅವರೆಕಾಳು ದುಬಾರಿ: ತೊಗರಿ ಬೇಳೆ ಸೇರಿದಂತೆ ಬೇಳೆ, ಧಾನ್ಯಗಳ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅವರೆ ಕಾಳು ಕೆ.ಜಿಗೆ ₹10 ದುಬಾರಿಯಾಗಿದ್ದು, ಹುರಿಗಡಲೆ, ಬಟಾಣಿ, ಕಡಲೆಬೀಜ ಏರಿಕೆಯತ್ತ ಮುಖ ಮಾಡಿವೆ.

ಜೀರಿಗೆ ಕಡಿಮೆ: ನಿಧಾನವಾಗಿ ಜೀರಿಗೆ ಧಾರಣೆ ಇಳಿಕೆಯತ್ತ ಸಾಗಿದ್ದು, ಈ ವಾರ ಕೆ.ಜಿಗೆ ₹20 ಕಡಿಮೆಯಾಗಿದೆ. ಮೆಣಸಿನಕಾಯಿ, ಮೆಂತ್ಯ, ಗೋಡಂಬಿ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹280–300, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹210–220, ಹುಣಸೆಹಣ್ಣು ₹130–160, ಕಾಳುಮೆಣಸು ಕೆ.ಜಿ ₹620–650, ಜೀರಿಗೆ ಕೆ.ಜಿ ₹340–360, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹250–270, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಬಾದಾಮಿ ಕೆ.ಜಿ ₹600–650, ಗೋಡಂಬಿ ಕೆ.ಜಿ ₹580–620, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಮಾಂಸ: ಕೋಳಿ ಮಾಂಸದ ದರ ನಿಧಾನವಾಗಿ ಇಳಿಕೆಯತ್ತ ಸಾಗಿದ್ದು, ಈ ವಾರವೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹120, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹100ಕ್ಕೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.