ADVERTISEMENT

ತುಮಕೂರು: ಇಂದಿನಿಂದ ಅಧಿಕಾರಿಗಳ ಗ್ರಾಮ ಭೇಟಿ

ಭೂ ಪರಿಹಾರಕ್ಕೆ ದಾಖಲೆ ಸಲ್ಲಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 6:51 IST
Last Updated 24 ಜೂನ್ 2024, 6:51 IST

ತುಮಕೂರು: ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ಮಾಲೀಕರಿಗೆ ಪರಿಹಾರ ವಿತರಿಸುವ ಸಲುವಾಗಿ ಅಗತ್ಯ ದಾಖಲೆ ಪಡೆಯಲು ಅಧಿಕಾರಿಗಳ ತಂಡ ಜೂನ್‌ 24ರಿಂದ ಯೋಜನೆ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಲಿದೆ.

ಮೊದಲ ದಿನ ತಿಪಟೂರು ತಾಲ್ಲೂಕಿನ ಅಣ್ಣಾಪುರ, ಗೆದ್ಲೆಹಳ್ಳಿ, 25ರಂದು ಕಂಚಾಘಟ್ಟ, 26ರಂದು ಸಿದ್ಧನಹಳ್ಳಿ, ಜಕ್ಕನಹಳ್ಳಿ, 27ರಂದು ಹಟ್ನ, ರಜತಾದ್ರಿಪುರ, 28ರಂದು ಕರಡಿ, ನ್ಯಾಕೇನಹಳ್ಳಿ, 29ರಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜಯಚಾಮರಾಜಪುರ, ಜುಲೈ 1ರಂದು ಗುಬ್ಬಿಯ ಹರೇನಹಳ್ಳಿ, ಜುಲೈ 2ರಂದು ತುಮಕೂರು ತಾಲ್ಲೂಕಿನ ಕಲ್ಸೆಟ್‍ಗುಂಟೆ, ಅಪ್ಪಯ್ಯನಪಾಳ್ಯ, 3ರಂದು ತಿಪಟೂರಿನ ರಾಮಶೆಟ್ಟಿಹಳ್ಳಿ, ಬೊಮ್ಮಲಾಪುರ ಗ್ರಾಮಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಲಿದೆ.

‘ಪರಿಹಾರ ಪಾವತಿಸಲು ಅಗತ್ಯ ದಾಖಲೆ ಪಡೆಯಲಾಗುತ್ತಿದೆ. ಅಧಿಕಾರಿಗಳು ಭೂ ಮಾಲೀಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ. ದಾಖಲೆ ಸಲ್ಲಿಸದ, ಈವರೆಗೂ ಪರಿಹಾರ ಪಡೆಯದವರು ಸ್ಥಳದಲ್ಲಿ ಹಾಜರಿದ್ದು, ದಾಖಲೆ ಒದಗಿಸಬೇಕು. ಏನಾದರೂ ಸಮಸ್ಯೆ ಇದ್ದರೆ ಅವರ ಗಮನಕ್ಕೆ ತರಬಹುದು’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.