ADVERTISEMENT

ಗುಬ್ಬಿ: ರಸ್ತೆಯಲ್ಲಿ ಸಸಿನೆಟ್ಟ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 4:45 IST
Last Updated 26 ಜುಲೈ 2021, 4:45 IST
ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟಿಸಿದ ಗುಬ್ಬಿ ತಾಲ್ಲೂಕು ಅಮ್ಮನಘಟ್ಟ ಗ್ರಾಮಸ್ಥರು
ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟಿಸಿದ ಗುಬ್ಬಿ ತಾಲ್ಲೂಕು ಅಮ್ಮನಘಟ್ಟ ಗ್ರಾಮಸ್ಥರು   

ಗುಬ್ಬಿ: ರಸ್ತೆಗಳಲ್ಲಿ ಗುಂಡಿಬಿದ್ದಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮಸ್ಥರು ರಸ್ತೆಯಲ್ಲಿಯೇ ಗಿಡಗಳನ್ನು ನೆಟ್ಟು ಪ್ರತಿಭಟಿಸಿದರು.

ಕೃಷಿಕ ಮಹೇಶ್ ಮಾತನಾಡಿ, ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜನಪ್ರತಿನಿದಿಗಳು, ಅಧಿಕಾರಿಗಳು ಗಮನಹರಿಸಿಲ್ಲ ಎಂದರು.

ಮುಖಂಡ ನಟರಾಜು ಮಾತನಾಡಿ, ಗ್ರಾಮವು ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಸಾಕಷ್ಟು ವಾಹನ, ಜನರು ತಿರುಗಾಡುವುದರಿಂದ ರಸ್ತೆಸೌಕರ್ಯದ ಅಗತ್ಯವಿದೆ. ಅಧಿಕಾರಿಗಳನ್ನು ಕೇಳಿದರೆ ಯಾವುದೇ ಅನುದಾನವಿಲ್ಲ ಎಂದು ಹೇಳುತ್ತಾರೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಈ ರಸ್ತೆಯ ಸ್ಥಿತಿ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ADVERTISEMENT

ನಿವೃತ್ತ ಶಿಕ್ಷಕ ಬಸವರಾಜು, ಮೂಲ ಸೌಕರ್ಯ ಒದಗಿಸಿಕೊಡುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕರ್ತವ್ಯ. ಎಲ್ಲರೂ ಕಡೆಗಣಿಸಿದರೆ ಗ್ರಾಮೀಣ ಜನರು ಪರದಾಡಬೇಕಾಗುತ್ತದೆ. ವ್ಯವಸ್ಥಿತ ರಸ್ತೆ ಸಂಪರ್ಕ ಇದ್ದರೆ ರೈತರು ಮಾರುಕಟ್ಟೆಗಳಿಗೆ ಹೋಗಿಬರಲು ಅನುಕೂಲವಾಗುತ್ತದೆ ಎಂದರು.

‘ಗ್ರಾಮದ ರಸ್ತೆ ಹಾಳಾಗಿರುವ ನನ್ನ ಗಮನಕ್ಕೆ ಬಂದಿದೆ. ಪಂಚಾಯಿತಿಯಲ್ಲಿ ಯಾವುದೇ ಅನುದಾನವಿಲ್ಲದ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಸ್ತೆ ದುರಸ್ತಿಗೆ ಬದ್ಧ’ ಎನ್ನುತ್ತಾರೆ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಪ್ರದೀಪ್.

ಗ್ರಾಮಸ್ಥರಾದ ಪಟೇಲ್ ಜಯಣ್ಣ, ಚನ್ನಬಸವಯ್ಯ, ವೀರಭದ್ರಯ್ಯ, ಶಿವಗಂಗಯ್ಯ, ಕಾಂತರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.