ADVERTISEMENT

ಸಿದ್ಧಗಂಗಾ ಮಠಕ್ಕೆ ನೊಬೆಲ್ –ತಜ್ಞರ ಜೊತೆ ಸಮಾಲೋಚನೆ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 8:54 IST
Last Updated 31 ಜನವರಿ 2019, 8:54 IST
ಎಂ.ಬಿ.ಪಾಟೀಲ್‌ ಮಾತನಾಡಿದರು
ಎಂ.ಬಿ.ಪಾಟೀಲ್‌ ಮಾತನಾಡಿದರು   

ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರಿಗೆ ಇಂದಲ್ಲಾ ನಾಳೆ ಮರಣೋತ್ತರವಾಗಿ ಭಾರತರತ್ನ ನೀಡಬಹುದು’ ಎಂದುಗೃಹ ಸಚಿವ ಎಂ.ಬಿ.ಪಾಟೀಲಹೇಳಿದರು.

ಸಿದ್ಧಗಂಗಾಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಮರಣೋತ್ತರವಾಗಿ ನೊಬೆಲ್ ನೀಡಲು ಸಾಧ್ಯವಿಲ್ಲ. ಆದ್ದರಿಂದ ಸಿದ್ದಗಂಗಾ ಮಠದ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಗುರುತಿಸಿ ನೊಬೆಲ್ ನೀಡಬಹುದು. ಈ ಸಂಬಂಧಅನುಸರಿಸಬಹುದಾದ ಪ್ರಕ್ರಿಯೆ‌ಗಳ ಕುರಿತು ತಜ್ಞರ ಜೊತೆ ಸಮಾಲೋಚಿಸುತ್ತಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಸಹಕಾರ ನೀಡಬೇಕು’ ಎಂದು ಅವರು ಕೋರಿದರು.

‘ಶರಣರ ತತ್ವ ಮತ್ತು ಆದರ್ಶಗಳನ್ನು ಎತ್ತಿ ಹಿಡಿದವರು ಶಿವಕುಮಾರ ಸ್ವಾಮೀಜಿ. ಪೂಜ್ಯರನ್ನು ಭೇಟಿ ಮಾಡಲು ಬಂದಾಗ ನನಗೆ ಹಿತವಚನ. ಯಾರೇ ಬಂದರು ಅವರಿಗೆ ಪ್ರಸಾದ ಸ್ವೀಕರಿಸಿ ಹೋಗಿ ಎನ್ನುತ್ತಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷಬಿ.ಎಸ್.ಯಡಿಯೂರಪ್ಪ ಸ್ವಾಮೀಜಿಯನ್ನು ಸ್ಮರಿಸಿದರು.

‘ಸಿದ್ಧಲಿಂಗ ಸ್ವಾಮೀಜಿ ಅವರಿಗೂ ನಾವೆಲ್ಲ ಶಿವಕುಮಾರ ಸ್ವಾಮೀಜಿ ಅವರಿಗೆ ಕೊಟ್ಟಷ್ಟೇ ಸಹಕಾರವನ್ನು ನೀಡಬೇಕು’ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.