ADVERTISEMENT

ಬೈಕ್‌ಗೆ ಟಿಪ್ಪರ್ ಲಾರಿ ಡಿಕ್ಕಿ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 15:38 IST
Last Updated 18 ಏಪ್ರಿಲ್ 2024, 15:38 IST
<div class="paragraphs"><p>ಅಪಘಾತ– ಸಾಂದರ್ಭಿಕ ಚಿತ್ರ</p></div>

ಅಪಘಾತ– ಸಾಂದರ್ಭಿಕ ಚಿತ್ರ

   

ತುಮಕೂರು: ನಗರದ ಶಿರಾ ಗೇಟ್ ಬಳಿ ಗುರುವಾರ ರಾತ್ರಿ ಟಿಪ್ಪರ್ ಲಾರಿ ಮತ್ತು ಬೈಕ್ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಚಾಲಕಿ ರತ್ನಮ್ಮ (55) ಎಂಬುವರು ಮೃತಪಟ್ಟಿದ್ದಾರೆ.

ಶಿರಾ ಗೇಟ್ ಹತ್ತಿರದ ಅರಳಿಮರಪಾಳ್ಯದ ನಿವಾಸಿ. ನಗರದಿಂದ ಮನೆಯ ಕಡೆಗೆ ಹೋಗುವಾಗ ಬೈಕ್ ಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿಯಾಗಿದೆ. ನೆಲಕ್ಕುರುಳಿದ ರತ್ನಮ್ಮ ದೇಹದ ಮೇಲೆ ಟಿಪ್ಪರ್ ಚಕ್ರ ಹತ್ತಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌.

ADVERTISEMENT

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.