ADVERTISEMENT

ತುಮಕೂರು | ‘ಪ್ರಜಾವಾಣಿ’ಯಿಂದ ಮಧುಮೇಹ ಜಾಗೃತಿ ನಡಿಗೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 6:22 IST
Last Updated 11 ನವೆಂಬರ್ 2023, 6:22 IST
ತುಮಕೂರಿನಲ್ಲಿ ಶುಕ್ರವಾರ ವಿಶ್ವ ಮಧುಮೇಹ ದಿನ ಆಚರಣೆಯ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆಯಿಂದ ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಚಾಲನೆ ನೀಡಿದರು. ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ ಇತರರು ಇದ್ದಾರೆ
ತುಮಕೂರಿನಲ್ಲಿ ಶುಕ್ರವಾರ ವಿಶ್ವ ಮಧುಮೇಹ ದಿನ ಆಚರಣೆಯ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆಯಿಂದ ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಚಾಲನೆ ನೀಡಿದರು. ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ ಇತರರು ಇದ್ದಾರೆ   

ತುಮಕೂರು: ವಿಶ್ವ ಮಧುಮೇಹ ದಿನ ಆಚರಣೆಯ ಅಂಗವಾಗಿ ನಗರದಲ್ಲಿ ಶುಕ್ರವಾರ ಸಿದ್ಧಗಂಗಾ ಆಸ್ಪತ್ರೆಯಿಂದ ‘ಪ್ರಜಾವಾಣಿ’ ಸಹಯೋಗದಲ್ಲಿ ಜಾಗೃತಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದ ಮುಂಭಾಗದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ವಿ.ಅಶೋಕ್‌ ಜಾಗೃತಿ ನಡಿಗೆಗೆ ಚಾಲನೆ ನೀಡಿದರು. ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್‌, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನಮೂರ್ತಿ ಇತರರು ಹಾಜರಿದ್ದರು.

ಎಸ್‌ಐಟಿ ಕಾಲೇಜಿನಿಂದ ಬಿ.ಎಚ್‌.ರಸ್ತೆಗೆ ಸಾಗಿದ ಜಾಥಾವು ಎಸ್‌.ಎಸ್‌.ವೃತ್ತದ ಮೂಲಕ ಸಾಗಿ ಸಿದ್ಧಗಂಗಾ ಆಸ್ಪತ್ರೆಯ ಬಳಿ ಕೊನೆಗೊಂಡಿತು.

ADVERTISEMENT

‘ಮಧುಮೇಹ ನಿಯಂತ್ರಿಸಲು ಶಿಸ್ತು ಬದ್ಧ ಜೀವನ ಶೈಲಿ ಮುಖ್ಯ, ಕಡಿಮೆ ಸಕ್ಕರೆ– ಕಡಿಮೆ ಅಪಾಯ, ದಪ್ಪನೆಯ ದೇಹ ಸಕ್ಕರೆಯ ಸ್ನೇಹ, ಮಧುಮೇಹ ಯಾರಿಗಾದರೂ ಬರಬಹುದು‌ ಮುನ್ನೆಚ್ಚರಿಕೆ ಅಗತ್ಯ’ ಎಂಬ ನಾಮಫಲಕ ಹಿಡಿದು ಸಾಗಿದರು. ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ನೆರೆದಿದ್ದ ಜನರಿಗೆ ಮಧುಮೇಹ ಜಾಗೃತಿಯ ಕರಪತ್ರ ಹಂಚಿದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಸಿದ್ಧಗಂಗಾ ಆಸ್ಪತ್ರೆ ವತಿಯಿಂದ ‘ನವೆಂಬರ್‌ ಮಾಸ– ಮೂರು ಸಪ್ತಾಹ’ ಕಾರ್ಯಕ್ರಮದಡಿ ನ.30ರ ವರೆಗೆ ವಿವಿಧ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳ ಆರೋಗ್ಯ ಸಮಸ್ಯೆ, ಮಧುಮೇಹ, ನರರೋಗ ಸಮಸ್ಯೆಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

ಪೌಷ್ಟಿಕತೆ ಬಗ್ಗೆ ಸಲಹೆ ನೀಡಿ ಪೌಷ್ಟಿಕ ಆಹಾರ ಸೇವನೆಯ ಕುರಿತು ಅಗತ್ಯ ಮಾಹಿತಿ ಒದಗಿಸಲಾಗುತ್ತದೆ. ಮಧುಮೇಹ ತಪಾಸಣೆ, ನರರೋಗ ಸಮಸ್ಯೆಗಳ ಬಗ್ಗೆ ತಪಾಸಣೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ.

ತುಮಕೂರಿನಲ್ಲಿ ಶುಕ್ರವಾರ ವಿಶ್ವ ಮಧುಮೇಹ ದಿನ ಆಚರಣೆಯ ಅಂಗವಾಗಿ ಸಿದ್ಧಗಂಗಾ ಆಸ್ಪತ್ರೆಯಿಂದ ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ನಡಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.