ತುಮಕೂರು: ಕಲೆ, ಸಂಸ್ಕೃತಿಯು ಜನರಿಗೆ ನೈತಿಕ ಮೌಲ್ಯಗಳನ್ನು ತುಂಬುವ ಸಾಧನೆಗಳಾಗಿವೆ ಎಂದು ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರು ವಲಯ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಭ್ರಮೆ ಬಿಟ್ಟು ವಾಸ್ತವದಲ್ಲಿ ಅಧ್ಯಯನ ನಡೆಸಬೇಕು. ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಾಧನೆ ಸುಲಭವಾಗಲಿದೆ ಎಂದು ಸಲಹೆ ಮಾಡಿದರು.
ರಾಷ್ಟ್ರೀಯ ಯುವಜನ ಅಭಿವೃದ್ಧಿ ಕಾರ್ಯಕಾರಿ ಮಂಡಳಿ ಸದಸ್ಯ ಡಾ.ತಿಪ್ಪೇಸ್ವಾಮಿ, ಯುವಜನೋತ್ಸವದ ಸಾಮರಸ್ಯದ ಮಹತ್ವ, ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು. ಯುವಜನ ನೀತಿಯನ್ನು ಜಾರಿಗೆ ತರಲು ಸಹಕಾರ ನೀಡಿದ ಯುವ ಸಮೂಹವನ್ನು ಅಭಿನಂದಿಸಿದರು.
ವಿದ್ಯೋದಯ ಫೌಂಡೇಷನ್ ಅಧ್ಯಕ್ಷ ಎಚ್.ಎಸ್.ಪುಟ್ಟಕೆಂಪಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯೋದಯ ಕಾನೂನು ಕಾಲೇಜು ನಿರ್ದೇಶಕ ಎಚ್.ಎಸ್.ರಾಜು, ಪ್ರೊ.ಕೆ.ಚಂದ್ರಣ್ಣ, ಪ್ರಾಂಶುಪಾಲ ಡಾ.ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಕೆ.ವಿ.ರೂಪ ಸ್ವಾಗತಿಸಿದರು, ಶಮಾಸೈಯಿದಿ ವಂದಿಸಿದರು. ಎ.ಎಚ್.ರಶ್ಮಿ ನಿರೂಪಿಸಿದರು. ಡಾ.ವಿ.ಕಿಶೋರ್ ನಿರ್ವಹಿಸಿದರು.
ಬೆಂಗಳೂರು ವಿಭಾಗದ 25 ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಯುವಜನೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.