ಉಡುಪಿ: ‘ಉಡುಪಿ ಜಿಲ್ಲೆಯನ್ನು ಸಾಂಸ್ಕೃತಿಕ ನಗರವನ್ನಾಗಿಸುವಲ್ಲಿ ನೃತ್ಯ, ನಾಟಕ ಹಾಗೂ ಸಂಗೀತ ಶಾಲೆಗಳು ಪ್ರಮುಖ ಪಾತ್ರವಹಿಸಿವೆ’ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತಿಳಿಸಿದರು. ನೃತ್ಯನಿಕೇತನ ಕೊಡವೂರು ಸಂಸ್ಥೆ ಸೋಮವಾರ ನಗರದಲ್ಲಿ ಆಯೋ ಜಿಸಿದ್ದ ರಜತಪಥದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಇತರೆ ಜಿಲ್ಲೆಗಳಲ್ಲಿ ಮಕ್ಕ ಳಿಗೆ ಸಾಂಸ್ಕೃತಿಕ ತರಬೇತಿ ಕೇಂದ್ರಗಳ ಕೊರತೆ ಎದ್ದು ಕಾಣುತ್ತಿದೆ. ಶಿಷ್ಯನಿಗೆ ಗುರುವಿನ ಆಶ್ರಯ ಸಿಗುವ ತನಕ ವಿದ್ಯೆ ಒಲಿಯುವುದಕ್ಕೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಉಡುಪಿಯ ಜನತೆ ಸೌಭಾ ಗ್ಯವಂತರು. ಇಲ್ಲಿನ ಸಂಗೀತ, ನೃತ್ಯ, ನಾಟಕ ಶಾಲೆಗಳು ಹಾಗೂ ಗುರುಗಳು ಸಮರ್ಥವಾದ ತಮ್ಮ
ದಾಯಕತ್ವದಿಂದ ಸಮಾಜವ ನ್ನು ಸಾಂಸ್ಕೃತಿಕ ನಗರವಾಗಿ ಪರಿರ್ವತಿಸಿದ್ದಾರೆ ಎಂದರು.
ಕಲಾವಿದ ಎಂ.ಎಲ್ ಸಾಮಗ, ಪ್ರತಿಭಾ ಸಾಮಗ, ಉದ್ಯಮಿ ಯು. ವಿಶ್ವನಾಥ್ ಶೆಣೈ, ಬೆಂಗಳೂರು ಕಲಾದರ್ಶಿನಿ ಅಧ್ಯಕ್ಷ ಶ್ರೀನಿವಾಸ ಸಾಸ್ತಾನ, ಸಿ. ಆನಂದ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಅಧ್ಯಕ್ಷ ಉದಯ ಶೆಟ್ಟಿ ಉಪಸ್ಥಿತರಿದ್ದರು. ಚಂದ್ರಶೇಖರ್ ಕೊಡವೂರು ಕಾರ್ಯ ಕ್ರಮ ನಿರೂಪಿಸಿದರು, ಸುಧೀರ್ ರಾವ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.