ADVERTISEMENT

ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 10:15 IST
Last Updated 7 ಜೂನ್ 2013, 10:15 IST

ಹೆಬ್ರಿ: ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯ ಹೆಬ್ಬೇರಿ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ನಡೆದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ತುಳು ಅಕಾಡೆಮಿ ಸದಸ್ಯ ರಮೇಶ ಕಲ್ಮಾಡಿ ನೇತೃತ್ವದ ಮುನಿಯಾಲು ಮುಟ್ಲುಪಾಡಿಯ ಅರ್ಧನಾರೀಶ್ವರ ಯುವತಿ ಮಂಡಲದ ಸದಸ್ಯರ ನೃತ್ಯ ಕಾರ್ಯಕ್ರಮ, ಕಂಗೀಲು ಕುಣಿತ, ಹೆಬ್ರಿ ಮೂಲದ ಬೆಂಗಳೂರು ಪೃಥ್ವಿ ಓಕುಡ ದೀಪಾ ನೃತ್ಯ, ಮಂದಾರ್ತಿ ಚಂದ್ರ ನಾಯ್ಕ ತಂಡದ ಕುಡುಬಿ ನೃತ್ಯ, ಮುದ್ರಾಡಿಯ ಸುಕುಮಾರ್ ಮೋಹನ್ ಬಳಗದವರಿಂದ `ಮೂರು ಹೆಜ್ಜೆಗಳು' ನಾಟಕ ಪ್ರದರ್ಶನಗೊಂಡು ಸಾಂಸ್ಕೃತಿಕ ಸಂಭ್ರಮ ಸೃಷ್ಟಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.