ಕಾರ್ಕಳ: ವಿಷಯ ಮನನ ಮಾಡಿಕೊಳ್ಳಲು ಪ್ರಶ್ನಾ, ಸಮಸ್ಯಾ ಮತ್ತು ಜಿಜ್ಞಾಸೆ ಅನ್ನುವ ಮೂರು ವಿಧ ಗಳಿದ್ದು ಪ್ರಶ್ನೆಗೆ ನಿಖರವಾದ ಉತ್ತರ, ಸಮಸ್ಯಾಗೆ ವ್ಯಕ್ತಿ ಅವಲಂಬಿತ ಉತ್ತರ ಇದ್ದರೆ ಜಿಜ್ಞಾಸೆಗೆ ಉತ್ತರವೇ ಸಿಗದು ಎಂದು ಅಂತರರಾಷ್ಟ್ರೀಯ ಭಾಷಾ ವಿಜ್ಞಾನಿ ಪ್ರೊ. ಕೆ. ಪಿ. ರಾವ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ನಿಟ್ಟೆ ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣದ ಅಭಿವೃದ್ಧಿ ಅಭಿ ಯಾನದ ಸಹಭಾಗಿತ್ವದಲ್ಲಿ ಗುರುವಾರ ‘ಜ್ಞಾನ ಕೇಂದ್ರದ ಅವಿಷ್ಕಾರ - ಭವಿಷ್ಯದ ಶೈಕ್ಷಣಿಕ ಗ್ರಂಥಾಲ ಯಗಳು’ ಎಂಬ ವಿಷಯದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ಕಾಲದಿಂದಲೂ ಪ್ರಶ್ನೆಗಳು ಏಕರೂಪ ವಾಗಿದ್ದರೂ ಉತ್ತರಗಳು ಸಮಯ ಬದಲಾದಂತೆ ಬದಲಾಗುತ್ತಿವೆ. ಹಿಂದಿನ ಕಾಲದಲ್ಲಿ ಮಾಹಿತಿ ನೀಡಲು ಗ್ರಂಥಾಲಯಗಳಲ್ಲಿ ನೌಕರರಿದ್ದು ನಂತರ ಪಾರಾಯಣಕ್ಕೆ ಬದಲಾಯಿತು. ಆದರೆ ಈಗ ಅದು ದಾಖಲೆ ರೂಪಗಳಲ್ಲಿ ಲಭ್ಯ. ಈ ದಾಖಲೆಯನ್ನು ಒಂದು ಸೂಕ್ತ ಭಾಷೆಯಲ್ಲಿ ಮಾಡಲಾಗಿದ್ದು ಕಲಿಸು ವವರಿಗೂ, ಕಲಿಯುವವರಿಗೂ ಅನುಕೂಲವಾಗಿದೆ. ಪುಸ್ತಕದ ಬದಲು ಕಂಪ್ಯೂಟರ್ ಈ ಮಾಹಿತಿಯನ್ನು ಸಂಗ್ರಹಿಸಿಡಲು ಸಹಕಾ ರಿ ಯಾಗಿದೆ. ಇನ್ನು ಭವಿಷ್ಯದಲ್ಲಿ ಮಾಹಿತಿ ಸಂಗ್ರಹಣೆಯು ಮ್ಯಾಟ್ರಿಕ್ಸ್ ರೂಪದಲ್ಲಿ ಸರಳ ಹಾಗೂ ಸಂಕುಚಿತವಾಗಿರುತ್ತದೆ ಎಂದರು.
ಸಂಶೋಧನೆಯ ಪ್ರಬಂಧಗಳ ‘ಎನ್.ಎಮ್. ಎ.ಎಮ್. ಐ.ಟಿ. ನ್ಯೂಸ್ ಬುಲೆಟಿನ್’ ನನ್ನು ಬಿಡುಗಡೆಗೊಳಿಸಲಾಯಿತು. ಬೆಂಗಳೂರಿನ ಪ್ರೊ. ಕೆ. ಎಸ್. ರಾಘವನ್ ದಿಕ್ಸೂಚಿ ಭಾಷಣ ಮಾಡಿದರು.ಸಂಸ್ಥೆಯ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್‌ಕರ್ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ನೇಪಾಳದ ಪ್ರೊ.ಭೀಮ್ ಧೋಜ್ ಶ್ರೇಷ, ಶ್ರೀಲಂಕಾದ ಪ್ರೊ.ವಾತ್‌ಮೆನಲ್ ಸೆನೆವಿರತ್ನೆ, ಪೆನ್ಸಿಲ್‌ವೇನಿಯಾದ ಪ್ರೊ.ಫಮಿದಾ ಹ್ಯಾಂಡಿ, ಸೌದಿ ಅರೇಬಿಯದ ಪ್ರೊ.ವಿಜಯಕುಮಾರ್ ಜೆ.ಕೆ, ಫಿಲಡೆಲ್ಫಿಯಾದ ಪ್ರೊ.ಎಡ್ವಿನ್, ಬೆಂಗಳೂರಿನ ಪ್ರೊ.ಐ.ಕೆ.ರವಿಚಂದ್ರ ರಾವ್, ಸುರತ್ಕಲ್ ಎನ್.ಐ. ಟಿ.ಕೆಯ ಪ್ರೊ.ಕೆ. ಚಂದ್ರಶೇಖರನ್, ಬೆಂಗಳೂರು ಡಿ.ಆರ್.ಟಿ.ಸಿಯ ಪ್ರೊ.ಎಂ. ಕೃಷ್ಣಮೂರ್ತಿ, ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಮಹೇಶ್ ಮುಧೋಳ, ಪ್ರೊ.ಎಂ.ಕೆ. ಭಂಡಿ ಹಾಗೂ ಪ್ರೊ. ಕೈಸರ್ ಮುನಿಬುಲ್ಲ ಖಾನ್, ಬೆಳಗಾವಿ ವಿಟಿಯುನ ಡಾ.ಕೆ.ಆರ್.ಮುಲ್ಲ, ಗೋವಾ ವಿಶ್ವವಿದ್ಯಾಲಯದ ಡಾ.ಗೋಪ ಕುಮಾರ್, ಮಣಿಪಾಲ ವಿಶ್ವವಿ ದ್ಯಾಲಯದ ಡಾ.ಶಿವನಂದ ಭಟ್ ಮುಂತಾದವರು ಭಾಗವಹಿಸಿದರು.
ಸಮ್ಮೇಳನದ ಕಾರ್ಯದರ್ಶಿ ಗ್ರಂಥಪಾಲಕ ಡಾ.ಯಾಜಿ.ಎಚ್. ದಿವಾಕರ ಭಟ್ ಸ್ವಾಗತಿಸಿದರು. ಗ್ರೈನಾಲ್ ಡಿಮೆಲ್ಲೊ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.