ಕೋಟ(ಬ್ರಹ್ಮಾವರ): ಮಾನವ ಹಕ್ಕುಗಳು ಸನ್ನಿವೇಶ ಆಧಾರಿತ ಹಾಗೂ ಆಯಾ ಸಂಸ್ಕೃತಿ, ಜೀವನ ಕ್ರಮ ಇತ್ಯಾದಿ ಗಳನ್ನು ಅವಲಂಬಿಸಿರುತ್ತವೆ. ಪ್ರಜಾಪ್ರಭು ತ್ವದ ನೆಲೆಗಟ್ಟಿನಲ್ಲಿ ಮಾನವ ಹಕ್ಕುಗಳನ್ನು ಪ್ರತಿಯೊಬ್ಬರೂ ಅರ್ಥೈಯಿಸಿಕೊಳ್ಳಬೇಕಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ರಾಜಾರಾಂ ತೋಳ್ಪಾಡಿ ಹೇಳಿದರು.
ಕೋಟ ಥೀಂ ಪಾರ್ಕ್‌ನಲ್ಲಿ ಶನಿವಾರ ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಾನವ ಹಕ್ಕುಗಳು ಪಾಶ್ಚಿ ಮಾತ್ಯ ಮತ್ತು ಪೂರ್ವಾತ್ಯ ದೃಷ್ಟಿಕೋನ ಗಳು ಎಂಬ ವಿಷಯವಾಗಿ ನಡೆದ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ಇದಕ್ಕೂ ಮುನ್ನ ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ. ಕುಂದರ್ ವಿಚಾರ ಸಂಕಿರಣ ಉದ್ಘಾಟಿಸಿ, ಮಾನವ ಹಕ್ಕುಗಳ ಕುರಿತಾದ ಜಾಗೃತಿ ಮೂಡಿಸುವಲ್ಲಿ ಇಂತಹ ವಿಚಾರ ಸಂಕಿರಣ ಗಳು ಮಹತ್ವಪೂರ್ಣವಾದದ್ದು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್ ನಾಯಕ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟ ತಟ್ಟು ಪಂಚಾಯಿತಿಯ ಅಧ್ಯಕ್ಷ ಎಚ್. ಪ್ರಮೋದ್ ಹಂದೆ, ಪ್ರಾಧ್ಯಾಪಕ ಡಾ.ಕಿರಣ್, ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನ ಟಿ.ಪಿ.ಬಾಬುರಾಜ್, ಬಸ್ರೂರು ಕಾಲೇಜಿನ ಡಾ.ಎಂ.ದಿನೇಶ್ ಹೆಗ್ಡೆ, ಡಾ.ಪ್ರವೀಣ್ ಶೆಟ್ಟಿ, ಉದ್ಯಮಿ ಇಬ್ರಾಹಿಂ ಸಾಹೇಬ್, ನೀಲಾವರ ಮಂಜುನಾಥ ಶೆಟ್ಟಿಗಾರ್, ಕೃಷ್ಣಮೂರ್ತಿ ವೈ.ಆರ್., ಮಂಜುನಾಥ ಆಚಾರಿ ಎಳ್ಳಂ ಪಳ್ಳಿ, ನಾಗರಾಜ ಯು. ಇದ್ದರು.
ವಿಚಾರ ಸಂಕಿರಣದ ಸಂಯೋಜಕ ಪ್ರಶಾಂತ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ನ್ಯಾಸಕ ನಾಗರಾಜ ಯು. ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ವಿಚಾರ ಸಂಕಿರ ಣದಲ್ಲಿ ಮಣಿಪಾಲ ವಿ.ವಿಯ ಸಹಾಯಕ ಪ್ರಾಧ್ಯಾಪಕ ಲಾದನ್ ಲಾವ್ಸೆವಿಕ್ ‘ಪಾಶ್ಚಿ ಮಾತ್ಯ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಉಗಮ ಮತ್ತು ಬೆಳವಣಿಗೆ’ಯ ಬಗ್ಗೆ, ಮಣಿಪಾಲ ವಿ.ವಿ ಪ್ರಾಧ್ಯಾಪಕ ಡಾ.ನಂದ ಕಿಶೋರ್ ‘ಪೂರ್ವ ರಾಷ್ಟ್ರಗಳಲ್ಲಿ ಮಾನವ ಹಕ್ಕುಗಳ ಕಲ್ಪನೆ’, ಮಣಿಪಾಲ ವಿ.ವಿಯ ಸ್ಟೆಫಾನೋ ಗ್ರೇಕೊ ‘ರಾಜ್ಯ ಮತ್ತು ಮಾನವ ಹಕ್ಕುಗಳು’, ಸ್ಪೇನ್‌ನ ಸಾಮಾಜಿಕ ಕಾರ್ಯಕರ್ತೆ ಮಾರ್ತ ಕ್ಯಾಸ್ಟನೊಪ್ಸ್ ಗೊನ್ಸಾಲಿಸ್ ‘ಸುಸ್ಥಿರ ಅಭಿ ವೃದ್ಧಿ– ಮಾನವ ಹಕ್ಕುಗಳ ಉಲ್ಲಂಘನೆಗೆ ಪರಿಹಾರ’ ಎಂಬ ವಿಷಯ ಕುರಿತು ಮಾತನಾಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾ ದಿನ ಕರ್ ಸಮಾರೋಪ ಭಾಷಣ ಮಾಡಿದರು.
* ಮಾನವ ಹಕ್ಕುಗಳ ಉಲ್ಲಂಘನೆಯ ಜಾಗೃತಿ ಅತಿ ಮುಖ್ಯ. ಇವುಗಳ ರಕ್ಷಣೆಗೆ ಸ್ಥಾಪಿತವಾದ ಸಂಸ್ಥೆಗಳು ಇನ್ನಷ್ಟು ಕ್ರಿಯಾಶೀಲವಾಗಬೇಕು.
ದಿವ್ಯಾ ದಿನಕರ್, ಇಂಡಿಯನ್ ಸೋಶಿಯಲ್ ಆ್ಯಕ್ಷನ್ ಫೋರಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.