ಉಡುಪಿ: ಸಂಶೋಧನೆಯ ಅಪಾರ ಸಾಧ್ಯತೆಗಳನ್ನು ಶಿಕ್ಷಕರು ಮನಗಾಣ ಬೇಕು ಮತ್ತು ಸಂಶೋಧನೆಯ ಅರಿವನ್ನು ವಿದ್ಯಾರ್ಥಿಗಳಿಗೂ ಮನದಟ್ಟು ಮಾಡಿಸಬೇಕು ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶುಕ್ರ ವಾರ ನಡೆದ ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ನಿರ್ವಹಣಾ ಸಂಸ್ಥೆಯ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ಉತ್ತಮ ಪ್ರಾಧ್ಯಾಪಕ ಉತ್ತಮ ಸಂಶೋಧಕನೂ ಆಗಿರಬೇಕು ಎಂದು ಅವರು ಹೇಳಿದರು.
ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಕೃಷ್ಣ ಕೊತಾಯ ಮಾತನಾಡಿ, ವಿದೇಶಗಳಲ್ಲಿ ಸಂಶೋಧನೆಗೆ ಮಹ ಳಷ್ಟು ಮಹತ್ವವಿದೆ. ನಮ್ಮ ದೇಶದಲ್ಲಿ ಸಂಶೋಧನೆಗೆ ಇನ್ನೂ ಹೆಚ್ಚಿನ ಮಹತ್ವ ಸಿಗಬೇಕು. ಸ್ವಾಮೀಜಿ ಅವರು ತಮ್ಮ ದೂರದೃಷ್ಟಿಯಿಂದ ಸಂಶೋಧನೆಗೆ ಆದ್ಯತೆ ನೀಡಿ ಸಂಸ್ಥೆ ಆರಂಭಿಸಿರುವುದು ಶ್ಲಾಘನೀಯ ಎಂದರು. ನೂತನ ಸಂಶೋಧನಾ ಕೇಂದ್ರ ಕೈಗೆತ್ತಿಕೊಳ್ಳ ಲಿರುವ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಪೂರ್ಣಪ್ರಜ್ಞ ನಿರ್ವಹಣಾ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ಅವರು ಮಾತನಾಡಿ, ಈಗ ಆರಂಭವಾಗಿರುವ ಹೊಸ ಕೇಂದ್ರ ಈ ನಿಟ್ಟಿನಲ್ಲಿ ಕಾರ್ಯ ಪ್ರವರ್ತವಾಗಬೇಕು ಎಂದು ಹೇಳಿದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕ ವಾಗಿ ಮಾತನಾಡಿದ ಡಾ. ಎಂ.ಆರ್. ಹೆಗಡೆ, ಸಂಶೋಧನಾ ಕೇಂದ್ರದ ಉದ್ದೇಶಗಳನ್ನು ವಿವರಿಸಿದರು. ವಿದ್ಯಾ ರ್ಥಿಗಳು ಈ ಕೇಂದ್ರದ ಉಪಯೋಗ ಪಡೆಯಬೇಕು ಎಂದರು. ವಿದ್ಯಾರ್ಥಿ ಸಂಜನಾ ನಿಂಜೂರ್ ಕಾರ್ಯಕ್ರಮ ನಿರ್ವಹಿಸಿದರು. ಆರ್. ಮಾನಸ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.