ಉಡುಪಿ: ನೀಲಾವರ ಗೋಶಾಲೆಯ ಆವರಣದಲ್ಲಿ ನಿರ್ಮಿಸಿರುವ ಬೃಹತ್ ಕೆರೆಯ ಮಧ್ಯದಲ್ಲಿ ಪ್ರತಿಷ್ಠಾಪಿಸಲಾಗುವ ಕಾಳೀಯಮರ್ಧನ ಕೃಷ್ಣನ ಶಿಲಾವಿಗ್ರಹವನ್ನು ಶುಕ್ರವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ತರಲಾಯಿತು.
ಮುಖ್ಯಪ್ರಾಣ - ಗರುಡ ದೇವರ ವಿಗ್ರಹವನ್ನೊಳಗೊಂಡ ಶ್ರೀ ಕೃಷ್ಣ ವಿಗ್ರಹಕ್ಕೆ ಕೃಷ್ಣಮಠದ ಮಧ್ವ ಸರೋವರದಲ್ಲಿ ಅಭಿಷೇಕ ಮಾಡಿದ ಬಳಿಕ ಕೃಷ್ಣ ದೇವರ ಎದುರಿನ ಮಧ್ವ ಮಂಟಪದಲ್ಲಿ ಪರ್ಯಾಯ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಆರತಿ ಬೆಳಗಿದರು. ಬಳಿಕ ಬಿರುದಾವಳಿ ಸಹಿತ ಮೆರವಣಿಗೆಯಲ್ಲಿ ಪೇಜಾವರ ಮಠಕ್ಕೆ ಕೊಂಡೊಯ್ಯಲಾಯಿತು.
ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ಸ್ವಾಮೀಜಿ, ನಂದಳಿಕೆ ವಿಠಲ ಭಟ್, ಜಲಂಚಾರು ರಘುಪತಿ ತಂತ್ರಿ, ಭಾರತೀಶ ಬಲ್ಲಾಳ್, ವಾಸುದೇವ ಭಟ್ ಪೆರಂಪಳ್ಳಿ, ರಘುರಾಮ ಆಚಾರ್ಯ, ಇಂದು ಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.