ADVERTISEMENT

ಹಸ್ತಪ್ರತಿಗಳ ಸಂರಕ್ಷಣೆ ಸರ್ಕಾರದ ಕರ್ತವ್ಯ

ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದಲ್ಲಿ ಡಾ.ಕೆಳದಿ ಗುಂಡಾ ಜೋಯಿಸ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2016, 4:41 IST
Last Updated 4 ಫೆಬ್ರುವರಿ 2016, 4:41 IST
ಉಡುಪಿ ಎಂಜಿಎಂ ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಬುಧವಾರ ನಡೆದ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಹಿರಿಯ ವಿದ್ವಾಂಸ ಡಾ. ಕೆಳದಿ ಗುಂಡಾ ಜೋಯಿಸ್‌ ಉದ್ಘಾಟಿಸಿದರು.
ಉಡುಪಿ ಎಂಜಿಎಂ ಕಾಲೇಜಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಬುಧವಾರ ನಡೆದ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಹಿರಿಯ ವಿದ್ವಾಂಸ ಡಾ. ಕೆಳದಿ ಗುಂಡಾ ಜೋಯಿಸ್‌ ಉದ್ಘಾಟಿಸಿದರು.   

ಉಡುಪಿ: ಜ್ಞಾನ ದೇಗುಲದ ಆಸ್ತಿಯಾಗಿ ರುವ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವುದು ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳ ಕರ್ತವ್ಯ ಎಂದು ಹಿರಿಯ ವಿದ್ವಾಂಸ ಡಾ. ಕೆಳದಿ ಗುಂಡಾ ಜೋಯಿಸ್‌ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗ ಹಾಗೂ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯುಕ್ತ ಆಶ್ರ ಯದಲ್ಲಿ ನಗರದ ಎಂಜಿಎಂ ಕಾಲೇಜಿ ನಲ್ಲಿ ಬುಧವಾರ ನಡೆದ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಸ್ತಪ್ರತಿಗಳ ಸಂಶೋಧನೆ ತುಂಬ ಕ್ಲಿಷ್ಟಕರವಾದುದು. ಅದಕ್ಕೆ ತಾಳ್ಮೆ, ವಿದ್ವತ್‌, ಆರ್ಥಿಕ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ ಎಂದರು.

265 ವರ್ಷವಾದರೂ ಕರ್ನಾಟಕದ ಇತಿಹಾಸವನ್ನು ಒಳಗೊಂಡ ಕನ್ನಡ ಹಸ್ತಪ್ರತಿಯ ಪ್ರಕಟಣೆ ಇನ್ನೂ ಅಪೂರ್ಣ ವಾಗಿದೆ. ಕನ್ನಡ ಹಸ್ತಪ್ರತಿಗಳ ವಿವರಗಳ ನ್ನೊಳಗೊಂಡ ಗ್ರಂಥದ ಪ್ರಕಟಣೆ ಅಧ್ಯಯನಶೀಲರಿಗೆ ಅಗತ್ಯವೆಂಬು ವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಇದಕ್ಕೆ ಕನ್ನಡ ಶಾಸ್ತ್ರೀಯ ಭಾಷಾ ಯೋಜನೆ ಮೂಲಕ ಕನ್ನಡ ವಿಶ್ವವಿದ್ಯಾಲಯ ಕಾರ್ಯಪ್ರವೃತ್ತ ವಾಗಬೇಕು. ಅಲ್ಲದೆ, ಆಧುನಿಕ ತಂತ್ರ ಜ್ಞಾನಗಳನ್ನು ಬಳಕೆ ಮಾಡಿಕೊಳ್ಳು ವುದು ಸೂಕ್ತ ಎಂದು ಹೇಳಿದರು.

ಸ್ವಾತಂತ್ರ್ಯದ ಪೂರ್ವದಲ್ಲಿ ಕನ್ನಡ ಹಸ್ತಪ್ರತಿಗಳ ಅಧ್ಯಯನಕ್ಕೆ ಕನ್ನಡ ವಿದ್ವಾಂಸರನ್ನು ಬಿಟ್ಟು ಅನ್ಯಭಾಷಿಕರನ್ನು ನೇಮಿಸಿದ್ದು ವಿಪರ್ಯಾಸ. ಈ ಕಾರಣ ದಿಂದಲೇ ಎ.ಸಿ. ಬನ್ಸಲ್‌ ಮುಂತಾದವರ ಸಂಶೋಧನೆಗಳಲ್ಲಿ ಕೆಲವು ತಪ್ಪುಗಳಾ ಗಿವೆ. ಬಿ.ಎ. ಆಚಾರ್ಯ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಹಾಗೂ ಮಠಗಳಲ್ಲಿ ಉಡುಪಿಯ ಇತಿಹಾಸಕ್ಕೆ ಸಂಬಂಧಿಸಿದ ಅಪೂರ್ವ ಹಸ್ತಪ್ರತಿಗಳಿವೆ ಎಂದು ತಿಳಿಸಿದರು.

ಹಂಪಿ ವಿ.ವಿ.ಯ ಕನ್ನಡ ಹಸ್ತಪ್ರತಿಶಾಸ್ತ್ರ ವಿಭಾಗದಿಂದ ಹಸ್ತಪ್ರತಿಗಳ ಸಂರಕ್ಷಣೆ, ಅಧ್ಯಯನ, ಸರ್ವೇಕ್ಷಣೆ, ಸಂಗ್ರಹ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಪ್ರಾಚೀನ, ಲೌಕಿಕ ವಿಷಯಗಳಿಗೆ ಸಂಬಂಧಿಸಿದ 5 ಸಾವಿರ ಹಸ್ತಪ್ರತಿಗಳ ಸಂರಕ್ಷಣೆ ಮಾಡಲಾಗಿದೆ ಎಂದು ಹಂಪಿ ವಿ.ವಿ.ಯ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಫ್‌.ಟಿ. ಹಳ್ಳಿಕೇರಿ ಹೇಳಿದರು.

ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್‌. ಶಾಂತರಾಮ್‌ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್‌ ಇದ್ದರು.

ಶಿಬಿರದ ನಿರ್ದೇಶಕ ಡಾ. ಎಸ್‌.ಎಸ್‌. ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣ ಭಟ್‌ ಸ್ವಾಗತಿಸಿದರು, ಸಂಶೋಧಕಿ ಲತಾ ನಾಯಕ್‌ ನಿರೂಪಿಸಿದರು, ಶಹಿಸ್ತಾ ಬಾನು ವಂದಿಸಿದರು.

***ಮಠ, ಮಂದಿರಗಳು ಪೂರ್ವಗ್ರಹ ಪೀಡಿತ ಹಸ್ತಪ್ರತಿಗಳ ಪ್ರಕಟಣೆಗೆ ಒತ್ತಡ ಹೇರುತ್ತಿವೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ನೈಜ ಸಂಶೋ ಧನೆಗೆ ತುಂಬ ಅಪಾಯವಾಗುತ್ತದೆ.

ಡಾ.ಕೆಳದಿ ಗುಂಡಾ ಜೋಯಿಸ್‌
ಹಿರಿಯ ವಿದ್ವಾಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT