ಶಿರ್ವ: ಕಟಪಾಡಿ ಎಸ್.ವಿ.ಎಸ್.ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಹಳೆವಿದ್ಯಾರ್ಥಿ ಸಂಘದ ಸದಸ್ಯರು ಅಭಿನಯಿಸುವ ‘ಬರೆತಿನ ತಪ್ಪಂದ್’ ತುಳು ಸಾಮಾಜಿಕ ನಾಟಕದ ಮುಹೂರ್ತ ಸಮಾರಂಭ ಎಸ್.ವಿ.ಎಸ್. ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಟಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ, ರಂಗಭೂಮಿ ಕಲಾವಿದೆ ಪ್ರಭಾ ವಿ.ಶೆಟ್ಟಿ ಮುಹೂರ್ತ ನೆರವೇರಿಸಿ ಮಾತನಾಡಿ, ಕರಾವಳಿಯಲ್ಲಿ ತುಳು ಚಿತ್ರರಂಗ ಮತ್ತು ತುಳು ರಂಗಭೂಮಿ ಕ್ಷೇತ್ರ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಈ ರಂಗದಲ್ಲಿ ಅನೇಕ ಕಲಾವಿದರು ಬೆಳೆದು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಟಪಾಡಿ ಎಸ್.ವಿ.ಎಸ್.ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ರಂಗಭೂಮಿಯಲ್ಲಿ ಸಾಮಾಜಿಕ ಕಳಕಳಿಯ ಉತ್ತಮ ಹಾಸ್ಯಪ್ರಧಾನ ನಾಟಕಗಳನ್ನು ವೀಕ್ಷಿಸಲು ಪ್ರೇಕ್ಷಕರ ಕೊರತೆಯಿಲ್ಲ. ಗಟ್ಟಿ ಸಾಹಿತ್ಯಕೃತಿಗಳು ಹೆಚ್ಚು ಹೆಚ್ಚು ಮೂಡಿಬರಬೇಕಿದೆ ಎಂದರು.
ಚಿತ್ರನಟ ಸಂಜೀವ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು. ನಾಟಕಕಾರ ಕಿಶೋರ್ ಕಾಂಚನ್ಮಟ್ಟು, ನಾಟಕ ನಿರ್ದೇಶಕ ನವೀನ್ ಸಾಲ್ಯಾನ್ ಪಿತ್ರೋಡಿ, ನಾಟಕ ಕಲಾವಿದರು ಉಪಸ್ಥಿತರಿದ್ದರು. ಎಸ್.ವಿ.ಎಸ್.ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಕಲಾ ಕಾರ್ಯದರ್ಶಿ ಗಂಗಾಧರ್ ಕೆ.ಕಾಂಚನ್ ಸ್ವಾಗತಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.