ADVERTISEMENT

‘ಭಾಷೆ ಬೆಳೆಸಲು ಅಂತರ್ಜಾಲಕ್ಕೆ ತುಳು ಲೇಖನ ಸೇರಿಸಿ’

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2014, 8:35 IST
Last Updated 18 ಅಕ್ಟೋಬರ್ 2014, 8:35 IST

ಉಡುಪಿ: ‘ತುಳು ಲೇಖನಗಳನ್ನು ಹೆಚ್ಚಿನ ಸಂಖ್ಯೆ­ಯಲ್ಲಿ ಅಂತ ರ್ಜಾಲಕ್ಕೆ ಸೇರಿಸುವುದರಿಂದ ಭಾಷೆ­ಯನ್ನು ಸಮರ್ಥವಾಗಿ ಬೆಳೆಸ­ಬಹುದು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿ­ಚ್ಛೇದಕ್ಕೆ ಸೇರಿಸುವ ಕಾರ್ಯಕ್ಕೂ ಇದರಿಂದ ಬಲ ಬರಲಿದೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಹೇಳಿದರು.

ತುಳು ಭಾಷೆಯ ಬೆಳವಣಿಗೆಗಾಗಿ ಕರ್ನಾ ಟಕ ತುಳು ಸಾಹಿತ್ಯ ಅಕಾಡೆಮಿ ನಗರದ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜಿನಲ್ಲಿ ಏರ್ಪ ಡಿಸಿದ್ದ ‘ಅಂತರ್ಜಾಲೊಡು ತುಳು ಬಾಸೆಗ್‌ ಬಲ ಬರ್ಪಾಗ’ ಮೂರು ದಿನಗಳ ಕಾರ್ಯಾ­ಗಾರದ ಸಮಾರೋಪ ಸಮಾರಂಭದಲ್ಲಿ ಶುಕ್ರ ವಾರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಇತ್ತೀಚೆಗೆ ತುಳು ಭಾಷೆಯನ್ನು ಕಲಿಯಲು ಹೆಚ್ಚು ಜನರು ಆಸಕ್ತಿ ತೋರುತ್ತಿದ್ದಾರೆ. ಉಡುಪಿ, ಮಣಿಪಾಲದಲ್ಲಿಯೂ ತುಳು ಕಲಿಕೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಮಣಿ   ಪಾಲ ಅಥವಾ ಉಡುಪಿಯಲ್ಲಿ ತುಳು ಭಾಷೆ ಕಲಿಸುವ ಕಾರ್ಯಾಗಾರ­ವನ್ನು ಏರ್ಪಡಿ ಸುವ ಬಗ್ಗೆ ಯೋಚಿಸಲಾಗುತ್ತದೆ ಎಂದರು.

ಶಿಬಿರಾಧಿಕಾರಿ ವಿ.ಕೆ. ಯಾದವ್‌ ಮಾತ ನಾಡಿ, ವಿಕಿಪೀಡಿ­ಯಾದಲ್ಲಿ ತುಳು ಭಾಷೆ ಜೀವ ನ್ಮರಣ ಸ್ಥಿತಿಯಲ್ಲಿದೆ. ಹಾಗಾಗಿ ಹೆಚ್ಚಿನ ಸಂಖ್ಯೆ ಯಲ್ಲಿ ತುಳು ಲೇಖನವನ್ನು ವಿಕಿಪೀಡಿಯಾಕ್ಕೆ ಆಪ್‌ಲೋಡ್‌ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದರೆ ಅಂತರ್ಜಾಲ ದಲ್ಲಿ ತುಳುಭಾಷೆ ನಶಿಸಬಹುದು. ಈಗಾಗಲೇ ಸುಮಾರು 300 ಲೇಖನಗಳನ್ನು ಆಯ್ದು ಕೊಂಡು, ಅದರಲ್ಲಿ 157 ಲೇಖನಗಳನ್ನು ವಿಕಿಪೀಡಿಯಾಕ್ಕೆ ಆಪ್‌ಲೋಡ್‌ ಮಾಡಲಾಗಿದೆ ಎಂದರು.

ಎಂಜಿಎಂ ಕಾಲೇಜಿನ ಕಂಪ್ಯೂಟರ್‌ ವಿಭಾ ಗದ ಮುಖ್ಯಸ್ಥ ಪ್ರೊ. ಎಂ. ವಿಶ್ವನಾಥ್‌ ಪೈ, ಉಡುಪಿ ತುಳುಕೂಟದ ಉಪಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಸಹ ಶಿಬಿರಾಧಿಕಾರಿ ಮಿಥುನ್‌ ಶೆಟ್ಟಿಗಾರ್ ಸ್ವಾಗತಿಸಿದರು. ಸುಲೋಚನಾ ಕೊಡವೂರು ಪ್ರಾರ್ಥಿಸಿದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಿ. ದಯಾ ನಂದ ಕಾರ್ಯಕ್ರಮ ನಿರೂಪಿಸಿದರು. ಜಿ.ಎನ್‌. ನಾಗರಾಜ್‌ ವಂದನಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.