ADVERTISEMENT

ಉಡುಪಿ: ಕೃಷ್ಣನೂರಿನಲ್ಲಿ ಪ್ರಾಚ್ಯವಿದ್ಯಾ ಸಮ್ಮೇಳನದ ಸಡಗರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:57 IST
Last Updated 24 ಅಕ್ಟೋಬರ್ 2024, 7:57 IST
   

ಉಡುಪಿ: ಕೃಷ್ಣನೂರಿನಲ್ಲಿ ಅಖಿಲ ಭಾರತೀಯ ಪ್ರಾಚ್ಯವಿದ್ಯಾ 51ನೇ ಸಮ್ಮೇಳನ ಆರಂಭಗೊಂಡಿದೆ.

ಉಡುಪಿ ಪರ್ಯಾಯ ‌ಪುತ್ತಿಗೆ ಮಠದ ನೇತೃತ್ವದಲ್ಲಿ ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ ಸಹಯೋಗದಲ್ಲಿ ಗುರುವಾರ ಆರಂಭವಾಗಿರುವ ಮೂರು ದಿನಗಳ ಸಮ್ಮೇಳನಕ್ಕೆ ಯೋಗ ಗುರು ಬಾಬಾ ರಾಮದೇವ ಚಾಲನೆ ನೀಡಿದರು.

ಸನಾತನ ಧರ್ಮದ ಸಂಸ್ಕೃತವು ವಿಶ್ವವನ್ನೇ ಸೆಳೆದಿದೆ. ಸಂಸ್ಕೃತ ಕಲಿತರೆ ಲಾಭವೇನು ಎನ್ನುವವರೇ ಈಗ‌ ಸಂಸ್ಕೃತ ಕಲಿಕೆ ಪ್ರೋತ್ಸಾಹಿಸುತ್ತಿದ್ದಾರೆ. ಆಕ್ಸ್‌ಫರ್ಡ್‌, ಹಾರ್ವರ್ಡ್ ವಿವಿ ಮೀರಿಸುವಂತೆ ಸಂಸ್ಕೃತ ವಿವಿಗಳು ಮಿಂಚುತ್ತಿವೆ ಎಂದರು.

ADVERTISEMENT

ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಸನಾತನ ಸಂಸ್ಕೃತಿಗೆ ಹಾನಿ‌ ಮಾಡಲು ಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸನಾತನ ಧರ್ಮ ರಕ್ಷಣೆ ಮಾಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಪ್ರಾಚ್ಯವಿದ್ಯೆಯೇ ಭಾರತೀಯ ವಿದ್ಯೆಯಾಗಿದೆ. ಉಳಿದ ಭಾಷೆಗಳು ಬದಲಾಗುವ ಕಾಲಕ್ಕೆ ಪರಿವರ್ತನೆ ಆಗುತ್ತಿದ್ದರೂ ಸಂಸ್ಕೃತ ಭಾಷೆ ಮಾತ್ರ ದಶಸಹಸ್ರ ವರ್ಷಗಳಿಂದ ಏಕರೂಪ ದಲ್ಲಿದೆ. ಇಂಗ್ಲಿಷ್ ವ್ಯಾಮೋಹದ ವೇಗವನ್ನು ಮೀರಿ ಸಂಸ್ಕೃತ ಭಾಷೆಯ ಪ್ರೀತಿ ಬೆಳೆಯಬೇಕಾಗಿದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಸಂಸ್ಕ್ರತ ವಿಶ್ವವಿದ್ಯಾಲಯ ದ ಕುಲಪತಿ ಶ್ರೀನಿವಾಸ ವರಖೇಡಿ ಮಾತನಾಡಿ, ಭಾರತೀಯ ಇತಿಹಾಸದ ಪುನರ್ ಪ್ರತಿಷ್ಠೆ ನಮ್ಮ ಸಂಕಲ್ಪವಾಗಿದೆ ಎಂದರು.

ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠಾಧೀಶ ವಿದ್ಯೇಶತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ,  ಸಮ್ಮೇಳನದ ಅಧ್ಯಕ್ಷೆ ಸರೋಜಾ ಭಾಟಿ ಮತ್ತಿತರರು ಇದ್ದರು.

ದೇಶದ ಬೇರೆ ಬೇರೆ ಭಾಗಗಳ ವಿದ್ವಾಂಸರು, ಪಂಡಿತರು ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.