ADVERTISEMENT

ಮಣಿಪಾಲ | ಪರ್ಕಳ ಕೆನರಾ ಬ್ಯಾಂಕ್ ಎದುರೇ ತೆರೆದ ಹೊಂಡ

​ಪ್ರಜಾವಾಣಿ ವಾರ್ತೆ
Published 25 ಮೇ 2023, 5:16 IST
Last Updated 25 ಮೇ 2023, 5:16 IST
ಮಣಿಪಾಲ ಸಮೀಪದ ಪರ್ಕಳದ ಕೆನರಾ ಬ್ಯಾಂಕಿನ ಎದುರು ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಬೃಹತ್ ಹೊಂಡ ನಿರ್ಮಾಣವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಮಣಿಪಾಲ ಸಮೀಪದ ಪರ್ಕಳದ ಕೆನರಾ ಬ್ಯಾಂಕಿನ ಎದುರು ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಬೃಹತ್ ಹೊಂಡ ನಿರ್ಮಾಣವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.   

ಮಣಿಪಾಲ : ಸಮೀಪದ ಪರ್ಕಳದ ಕೆನರಾ ಬ್ಯಾಂಕಿನ ಎದುರು ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತು ಬೃಹತ್ ಹೊಂಡ ನಿರ್ಮಾಣವಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಗುಂಡಿಯ ಸುತ್ತಲೇ ಯಾವುದೇ ರಕ್ಷಣಾ ತಡೆ ಬೇಲಿ ನಿರ್ಮಿಸದ ಪರಿಣಾಮ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಕಂಟಕವಾಗುವ ಸಾಧ್ಯತೆಗಳು ಹೆಚ್ಚಾಗಿದೆ. ಬ್ಯಾಂಕ್‌ ಸೇವೆ ಪಡೆಯಲು ನೂರಾರು ಮಂದಿ ನಿತ್ಯ ಭೇಟಿ ನೀಡುವುದರಿಂದ ಗುಂಡಿಯಲ್ಲಿ ಬಿದ್ದು ಅಪಾಯ ಮೈಮೇಲೆ ಎಳೆದುಕೊಳ್ಳಬಹುದು. ಕೂಡಲೇ ಸಂಬಂಧಪಟ್ಟ ಇಲಾಖೆ ಕಾಮಗಾರಿ ಪೂರ್ಣಗೊಳಿಸಿ ಗುಂಡಿ ಮುಚ್ಚಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ನಿತ್ಯ ದೂಳಿನ ಅಭಿಷೇಕ’

ADVERTISEMENT

ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ಪರ್ಕಳದಿಂದ ಹೆಬ್ರಿವರೆಗೂ ಭರದಿಂದ ಸಾಗಿದ್ದು ಕಾಮಗಾರಿ ಪ್ರದೇಶದಲ್ಲಿ ವಿಪರೀತ ಧೂಳು ಏಳುತ್ತಿದೆ. ಪರಿಣಾಮ ಬೈಕ್‌ನಲ್ಲಿ ಸಾಗುವವರಿಗೆ ಹಾಗೂ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ದೂಳಿನಲ್ಲಿ ಅಭಿಷೇಕ ಮಾಡಿದಂತಾಗುತ್ತಿದೆ. ವಿಪರೀತ ದೂಳಿನಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾಮಗಾರಿ ನಿರ್ವಹಣೆ ಹೊಣೆ ಹೊತ್ತಿರುವವರು ದೂಳು ಏಳದಂತೆ ನೀರು ಸಿಂಪರಿಸಬೇಕು ಎಂದು ಸ್ಥಳೀಯರಾದ ವಿಶ್ವರಾಜ್, ರಾಜಕುಮಾರ್‌ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.