ADVERTISEMENT

ಉಡುಪಿ | ಕಲಾವಿದ ಮಹೇಶ್‌ ಕಲಾಕೃತಿಗೆ ರಾಷ್ಟ್ರಪತಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:21 IST
Last Updated 26 ಅಕ್ಟೋಬರ್ 2024, 15:21 IST
ಕಲಾಕೃತಿಯೊಂದಿಗೆ ಕಲಾವಿದ ಮಹೇಶ್ ಮರ್ಣೆ
ಕಲಾಕೃತಿಯೊಂದಿಗೆ ಕಲಾವಿದ ಮಹೇಶ್ ಮರ್ಣೆ   

ಹಿರಿಯಡ್ಕ: ಉಡುಪಿ ತಾಲ್ಲೂಕಿನ ಮರ್ಣೆಯ ಕಲಾವಿದ ಮಹೇಶ್ ಅವರು ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿ ಅವರಿಂದ ಮೆಚ್ಚುಗೆ ಪಡೆದಿದ್ದಾರೆ.

ಕಲೆಯಲ್ಲಿ ಸದಾ ಹೊಸತನ ಹುಡುಕುವ ಮಹೇಶ್ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು, 2 ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು, ಭೂತ ಕನ್ನಡಿಯನ್ನು ಸೂರ್ಯನ ಕಿರಣದ ನೇರಕ್ಕೆ ಹಿಡಿದು, ಕನ್ನಡಿಯಿಂದ ಉತ್ಪತ್ತಿಯಾಗುವ ಶಾಖ ಮರದ ಹಲಗೆಗೆ ಬೀಳುವಂತೆ ಮಾಡಿ ಸುಟ್ಟು ಭಾವಚಿತ್ರದ ಕಲಾಕೃತಿ ರಚಿಸಿದ್ದಾರೆ. ಕಲಾಕೃತಿಗೆ ‘ಸೂರ್ಯ ಚುಂಬಿಸಿದ ಕಲಾಕೃತಿ’ ಎಂದು ಹೆಸರಿಟ್ಟು ರಾಷ್ಟ್ರಪತಿ ಕಚೇರಿಗೆ ಕಳುಹಿಸಿದ್ದು, ರಾಷ್ಟ್ರಪತಿ ಅವರು ಮೆಚ್ಚಿ ಇ– ಮೇಲ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT