ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯಿತಿಯಲ್ಲಿ 34 ವರ್ಷ ಅಟೆಂಡರ್ ಆಗಿದ್ದ ಸೀತು ಪೂಜಾರಿ ಸೇವಾ ನಿವೃತ್ತಿ ಹೊಂದಿದ್ದು, ಸೋಮವಾರ ಅವರನ್ನು ಅಭಿನಂದಿಸಿ ಹೆಬ್ರಿ ತಾಲ್ಲೂಕು ಪಂಚಾಯಿತಿ ಇ.ಒ ಶಶಿಧರ ಕೆ.ಜಿ. ನೇತೃತ್ವದಲ್ಲಿ ತಾಲ್ಲೂಕು ಪಂಚಾಯಿತಿಯ ಜೀಪ್‌ನಲ್ಲಿ ಮನೆಯ ತನಕ ಬೀಳ್ಕೊಡಲಾಯಿತು.
ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸೀತು ಪೂಜಾರಿ ಅವರನ್ನು ತಮ್ಮ ಅಧಿಕಾರಾವಧಿಯಲ್ಲಿ ಪಂಚಾಯಿತಿಗೆ ಸೇರಿಸಿದ ಮಂಡಲ ಮಾಜಿ ಪ್ರಧಾನ ಚಂದ್ರಶೇಖರ ಹೆಗ್ಡೆ ಸಹಿತ ಅತಿಥಿಗಳು ಅಭಿನಂದಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸದಾಶಿವ ಸೆರ್ವೇಗಾರ್, ಸದಸ್ಯ ಎಂ. ಗಣಪತಿ, ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ಡಿ. ಪೂಜಾರಿ, ನೆಲ್ಲಿಕಟ್ಟೆ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರವೀಂದ್ರ ಹೆಗ್ಡೆ, ಮುದ್ರಾಡಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ, ಪಂಚಾಯಿತಿಯ ಮಾಜಿ ಸದಸ್ಯ ಸಂತೋಷಕುಮಾರ್ ಶೆಟ್ಟಿ, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಪೂಜಾರಿ, ಮುದ್ರಾಡಿ ಎಂಎನ್‍ಡಿಎಸ್‍ಎಂ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ, ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್ ಅವರು ಸೀತು ಪೂಜಾರಿ ಅವರ ಕಾರ್ಯ ವೈಖರಿ, ಕೆಲಸದ ಮೇಲಿನ ಶ್ರದ್ಧೆಯನ್ನು ಸ್ಮರಿಸಿದರು.
ಗ್ರಾಮದ ಹಿರಿಯರಾದ ಮಂಜುನಾಥ ಕಾಮತ್ ಮತ್ತು ಎಂ.ಚಂದ್ರಶೇಖರ್ ಹೆಗ್ಡೆ ಅವರು ಸೀತು ಪೂಜಾರಿ ಅವರನ್ನು ಸನ್ಮಾನಿಸಿದರು. ಪಂಚಾಯಿತಿ ಉಪಾಧ್ಯಕ್ಷೆ ವಸಂತಿ ಪೂಜಾರಿ, ಸದಸ್ಯರಾದ ಸತೀಶ್ ಗೌಡ, ಸನತ್ ಕುಮಾರ್, ಸಂತೋಷ್‌ಕುಮಾರ್ ಶೆಟ್ಟಿ, ಶುಭದರ್ ಶೆಟ್ಟಿ, ಜಗದೀಶ್ ಪೂಜಾರಿ, ಶಾಂತಾ ದಿನೇಶ್ ಪೂಜಾರಿ, ವನಿತಾ ಎನ್. ರಾವ್, ಮಾಜಿ ಸದಸ್ಯರಾದ ಶ್ಯಾಮ ಶೆಟ್ಟಿ, ವಿಶುಕುಮಾರ್, ಮುಖ್ಯಶಿಕ್ಷಕ ಶ್ರೀಪತಿ ಬಡ್ಕಿಲ್ಲಾಯ, ಶಿಕ್ಷಕ ಪಿ.ವಿ.ಆನಂದ ಸಾಲಿಗ್ರಾಮ, ಬಾಲಚಂದ್ರ ಎಂ, ಶ್ರೀಧರ ನಾಯಕ್, ಕೆ.ಎಸ್. ಕಲ್ಕೂರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.