ADVERTISEMENT

ಉಡುಪಿ | ಸದಾನಂದ ಶೆಣೈಗೆ ‘ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 12:34 IST
Last Updated 26 ನವೆಂಬರ್ 2024, 12:34 IST
<div class="paragraphs"><p>ಪ್ರಗತಿಪರ ಕೃಷಿಕ, ಸಂಘಟಕ, ಸಮಾಜಸೇವಕ, ಹಿರಿಯರಾದ ಬೆಳ್ಳೆ ಅಂಗಡಿ ಸದಾನಂದ ಶೆಣೈರವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ ನೀಡಿ ಸನ್ಮಾನಿಸಲಾಯಿತು.</p></div>

ಪ್ರಗತಿಪರ ಕೃಷಿಕ, ಸಂಘಟಕ, ಸಮಾಜಸೇವಕ, ಹಿರಿಯರಾದ ಬೆಳ್ಳೆ ಅಂಗಡಿ ಸದಾನಂದ ಶೆಣೈರವರಿಗೆ ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ ನೀಡಿ ಸನ್ಮಾನಿಸಲಾಯಿತು.

   

ಶಿರ್ವ: ಪ್ರಗತಿಪರ ಕೃಷಿಕ, ಸಂಘಟಕ, ಸಮಾಜಸೇವಕ ಬೆಳ್ಳೆ ಅಂಗಡಿ ಸದಾನಂದ ಶೆಣೈ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಕಾಪು ತಾಲ್ಲೂಕು ಘಟಕದ ವತಿಯಿಂದ ಕನ್ನಡ ಮಾಸಾಚರಣೆ ಪ್ರಯುಕ್ತ ‘ತಿಂಗಳ ಸಡಗರ– ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದಡಿ ಅವರ ಮನೆಯಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ‘ಜಿಲ್ಲಾ ಸಾಹಿತ್ಯ ಪರಿಷತ್ತು ಗೌರವ’ ನೀಡಿ ಸನ್ಮಾನಿಸಲಾಯಿತು.

ಗೌರವ ಪ್ರದಾನ ಮಾಡಿದ ಕಸಾಪ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಬೆಳ್ಳೆ ಅಂಗಡಿ ಕುಟುಂಬಸ್ಥರು ಸ್ವಾತಂತ್ರ್ಯ ಪೂರ್ವದಿಂದಲೇ ಈ ಭಾಗದ ನಾಗರಿಕರ ಸರ್ವಾಂಗೀಣ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಶಿಕ್ಷಣದ ಜೊತೆಗೆ ಸ್ವಾವಲಂಬಿ ಜೀವನಕ್ಕೆ ಪೂರಕ ಸೇವೆ ನೀಡಿ ಮನೆ ಮಾತಾಗಿದ್ದಾರೆ. 83 ವರ್ಷ ಹರೆಯದ ಸದಾನಂದ ಶೆಣೈ ಅವರ ಸೇವೆ ಸ್ಮರಣೀಯ ಎಂದರು.

ADVERTISEMENT

ಬೆಳ್ಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ ವಾಗ್ಲೆ ಮಾತನಾಡಿ, ಸದಾನಂದ ಶೆಣೈ ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಬೆಳ್ಳೆ ಪರಿಸರದಲ್ಲಿ ನಡೆದ ವಿವಿಧ ಸೇವಾ ಕಾರ್ಯಗಳನ್ನು ಪರಿಚಯಿಸಿದರು. ಇಳಿವಯಸ್ಸಿನಲ್ಲೂ ಮಾರ್ಗದರ್ಶಕರಾಗಿ ತೊಡಗಿಸಿಕೊಂಡಿರುವುದು ಅವರ ವಿಶೇಷತೆ ಎಂದರು.

ಕಸಾಪ ಕಾಪು ತಾಲ್ಲೂಕು ಘಟಕ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನಿತರ ಪತ್ನಿ ವಸಂತಿ ಶೆಣೈ, ಬೆಳ್ಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಿವ್ಯಾ ವಿ. ಆಚಾರ್ಯ, ಸದಸ್ಯ ಹರೀಶ್ ಶೆಟ್ಟಿ, ವಿಜ್ಞಾನಿ ಬೆಳ್ಳೆ ದಾಮೋದರ ಶೆಣೈ, ಬೆಳ್ಳೆ ಪಟೇಲ್ ಮನೆ ದಯಾನಂದ ಶೆಟ್ಟಿ, ಕಸಾಪ ಜಿಲ್ಲಾ ಸಮಿತಿಯ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ನರಸಿಂಹ ಮೂರ್ತಿ, ಕಚೇರಿ ನಿವೃತ್ತ ಸಿಬ್ಬಂದಿ ಇಟ್ಟು ಮುಗೇರ, ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ನೀಲಾನಂದ ನಾಯ್ಕ್, ಪುಂಡಲೀಕ ನಾಯಕ್ ಮೂಡುಬೆಳ್ಳೆ, ಸಾಹಿತಿ ರಿಚರ್ಡ್ ದಾಂತಿ, ಬೆಳ್ಳೆ ದೊಡ್ಡಮನೆ ವಸಂತ ಶೆಟ್ಟಿ ಇದ್ದರು. ಕಸಾಪ ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಸ್ವಾಗತಿಸಿದರು. ಸದಸ್ಯ ಕೃಷ್ಣಕುಮಾರ್ ಮಟ್ಟು ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.