ಪಡುಬಿದ್ರಿ: ಮಂಗಳೂರಿನ ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಆಶ್ರಯದಲ್ಲಿ ವರ್ಲ್ಡ್ ಬಿಲ್ಲವ ಪ್ರೀಮಿ ಯರ್ ಲೀಗ್ ‘ನಂದಾದೀಪ’ ಟ್ರೋಫಿ ಉದ್ಘಾಟನೆ ಈಚೆಗೆ ನೆರವೇರಿತು.
ಗುರುಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಪದ್ಮರಾಜ್ ಆರ್. ಮಾತನಾಡಿ ಬಡಜನರ ಸೇವೆ ಮಾಡುತ್ತಿರುವ ಬಿಲ್ಲವ ಬ್ರಿಗೇಡ್ ಸಮಾಜಕ್ಕೆ ಮಾದರಿ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಉದ್ಯಮಿಗಳಾದ ಎನ್.ಟಿ ಪೂಜಾರಿ, ರಿಚರ್ಡ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ನಂದಾ ದೀಪ ವಸತಿ ಯೋಜನೆಯಲ್ಲಿ ನಿರ್ಮಿಸಿದ ಮನೆಯ ಕೀ ಹಸ್ತಾಂತರಿಸಲಾಯಿತು.
ಯುವನಾಯಕ ಮಿಥುನ್ ರೈ, ಸಂದೇಶ ರಾಜ್ ಬಂಗೇರ, ನಾರಾ ಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಗೀತಾಂಜಲಿ ಸುವರ್ಣ, ಉದ್ಯಮಿಗಳಾದ ಸೂರಜ್ ಕಲ್ಯಾ, ಸದಾನಂದ ಪೂಜಾರಿ, ನಟ ರಾಹುಲ್ ಅಮೀನ್, ವಿನೀತ್ ಕುಮಾರ್, ಆರ್.ಕೆ ಬಂಗೇರ, ವಿಶ್ವನಾಥ್ ಕಟ್ತಲಾ, ಸಂದೇಶ್ ಪೂಜಾರಿ, ವಾಸುದೇವ್ ಕೋಟ್ಯಾನ್, ಪ್ರಬೋದ್ ಚಂದ್ರ ಹೆಜಮಾಡಿ, ಹರೀಶ್ ಶಾಂತಿ, ದಯಾಕರ್ ಪೂಜಾರಿ ಕುಲಾಯಿ, ಉಮಾನಾಥ್ ಅಮಿನ್, ಶರಣ್ ಪಂಪ್‌ವೆಲ್, ಗುರ್ಮೆ ಸುರೇಶ್ ಶೆಟ್ಟಿ, ಸತೀಶ್ ಮುಂಚೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.