ಬ್ರಹ್ಮಾವರ: ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ನಡೆದ ಕೇಂದ್ರ ಸರ್ಕಾರದ ಮಹತ್ವದ ಯೋಜನೆ 21ನೇ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಅವರು ಮಾತನಾಡಿ, ಜಾನುವಾರುಗಳ ವಿವಿಧ ತಳಿ ಸೇರಿದಂತೆ ಸಾಕುಪ್ರಾಣಿಗಳ ಗಣತಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಕರಾರುವಾಕ್ಕಾಗಿ ಅನುಷ್ಠಾನಕ್ಕೆ ಇಲಾಖೆ ಪಣತೊಟ್ಟಿರುವುದು ಶ್ಲಾಘನೀಯ. ಅಲ್ಲದೆ ರೇಬೀಸ್ ಮುಕ್ತ ವಾತಾವರಣ ಸೃಷ್ಟಿಗೆ ಯೋಗ್ಯವಾಗಿದೆ. ಸುಸ್ಥಿರ ಸಮಾಜ ಕಟ್ಟುವ ಕಾಯಕದಲ್ಲಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಕಾಯಕಲ್ಪ ನೀಡಲಿವೆ. ಕೇಂದ್ರದ ಈ ಎಲ್ಲಾ ಯೋಜನೆಗಳಿಂದ ಪ್ರಾಣಿಗಳ ಅಂಕಿ ಅಂಶ, ನಿಖರ ಮಾಹಿತಿ ದೊರೆಯಲಿದೆ ಎಂದು ಅಧಿಕಾರಿಗಳ ಕ್ರಿಯಾಶೀಲ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಶೆಟ್ಟಿ, ಡಾ.ಪ್ರದೀಪ ಕುಮಾರ್ ಎನ್.ಕೆ, ಡಾ.ಅನಿಲ ಕುಮಾರ್, ಡಾ.ಸೂರಜ್, ಡಾ.ಮಂಜುನಾಥ ಅಡಿಗ, ಎಣಿಕೆದಾರರಾದ ಸ್ವಾತಿ, ಸುಜಾತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.